ದರ್ಶನ್ 49ನೇ ಚಿತ್ರಕ್ಕೆ ಮೂಹೂರ್ತ ಫಿಕ್ಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 49 ನೇ ಚಿತ್ರದ ಶೂಟಿಂಗ್ ಗೆ ಮೂಹೂರ್ತ ಫಿಕ್ಸ್ ಆಗಿದೆ. ಪ್ರಕಾಶ್ ನಿರ್ದೇಶನದಲ್ಲಿ ದರ್ಶನ್ 49ನೇ ಸಿನಿಮಾ ಡಿಸೆಂಬರ್ ...
ದರ್ಶನ್
ದರ್ಶನ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 49 ನೇ ಚಿತ್ರದ ಶೂಟಿಂಗ್ ಗೆ ಮೂಹೂರ್ತ ಫಿಕ್ಸ್ ಆಗಿದೆ. ಪ್ರಕಾಶ್ ನಿರ್ದೇಶನದಲ್ಲಿ ದರ್ಶನ್ 49ನೇ ಸಿನಿಮಾ ಡಿಸೆಂಬರ್ 9ಕ್ಕೆ ಸೆಟ್ಟೇರಲಿದೆ.

ಸದ್ಯ ಚಿಂತನ್ ನಿರ್ದೇಶನದ ಚಕ್ರವರ್ತಿ ಸಿನಿಮಾಗಾಗಿ ಮೈಸೂರಿನ ಸುತ್ತಮುತ್ತಲಿನ ಸ್ಥಳಗಳಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ದರ್ಶನ್ ಭಾಗಿಯಾಗಿದ್ದಾರೆ.

ಪ್ರಿ ಪ್ರೊಡಕ್ಷನ್ ನಲ್ಲಿ ಸದ್ಯ ನಿರ್ದೇಶಕ ಪ್ರಕಾಶ್ ಬ್ಯುಸಿಯಾಗಿದ್ದಾರೆ. ಚಿತ್ರದ ಶೀರ್ಷಿಕೆ ಕೂಡ ಇನ್ನು ಫೈನಲ್ ಆಗಿಲ್ಲ, ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಕೃಷ್ಣಕುಮಾರ್ ಸಿನಿಮಾಟೋಗ್ರಾಫರ್ ಆಗಿದ್ದಾರೆ.  ಈ ಮೊದಲು ಕೃಷ್ಣ ಕುಮಾರ್ ದರ್ಶನ್ ಮತ್ತು ಪ್ರಕಾಶ್ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.

ಚಕ್ರವರ್ತಿ ಸಿನಿಮಾ ನಂತರ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ದರ್ಶನ್ ಜೊತೆಗಿನ ಎರಡನೇ ಸಿನಿಮಾ ಇದಾಗಿದೆ. ಪ್ರಕಾಶ್ ಜೊತೆಗಮ ಮೊದಲ ಚಿತ್ರವಾಗಿದೆ. ಪ್ರಕಾಶ್ ಈ ಮೊದಲು ವಿನಯ್ ರಾಜ್ ಕುಮಾರ್ ಅವರ ಸಿದ್ದಾರ್ಥ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com