ಸಿನಿಮಾ ಸುದ್ದಿ

ಡಿಸೆಂಬರ್ ೧ ಕ್ಕೆ ಚೌಕ ಸಿನೆಮಾದ ಮೊದಲ ಟೀಸರ್ ಬಿಡುಗಡೆ

ತರುಣ್ ಸುಧೀರ್ ನಿರ್ದೇಶನದ ಚೊಚ್ಚಲ ಸಿನೆಮಾ ಹಲವು ಕಾರಣಗಳಿಗೆ ಕನ್ನಡ ಸಿನೆರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಕುತೂಹಲವನ್ನು ಕಾಯ್ದುಕೊಳ್ಳಲು ನಿರ್ಮಾಪಕರು ಡಿಸೆಂಬರ್ ೧ ಕ್ಕೆ ಟೀಸರ್

ಡಿಸೆಂಬರ್ ೧ ಕ್ಕೆ ಚೌಕ ಸಿನೆಮಾದ ಮೊದಲ ಟೀಸರ್ ಬಿಡುಗಡೆ
ಚೌಕ ಸಿನೆಮಾದ ಭಿತ್ತಿಚಿತ್ರ
Published On :
ಬೆಂಗಳೂರು: ತರುಣ್ ಸುಧೀರ್ ನಿರ್ದೇಶನದ ಚೊಚ್ಚಲ ಸಿನೆಮಾ ಹಲವು ಕಾರಣಗಳಿಗೆ ಕನ್ನಡ ಸಿನೆರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಕುತೂಹಲವನ್ನು ಕಾಯ್ದುಕೊಳ್ಳಲು ನಿರ್ಮಾಪಕರು ಡಿಸೆಂಬರ್ ೧ ಕ್ಕೆ ಟೀಸರ್ ಬಿಡುಗಡೆಗೆ ಮುಂದಾಗಿದ್ದಾರೆ. 
"ಪಾತ್ರಗಳ ಮತ್ತೊಂದು ಬದಿಯನ್ನು ಟೀಸರ್ ತೆರೆದಿಡಲಿದೆ ಮತ್ತು ಪೋಸ್ಟರ್ ನಲ್ಲಿ ಕಂಡದ್ದಕ್ಕಿಂತ ವಿಭಿನ್ನವಾದದ್ದನ್ನು ಟೀಸರ್ ತೋರಿಸಲಿದೆ. ಸಿನೆಮಾದ ಕಂಟೆಂಟ್ ಬಗ್ಗೆ ಹೆಚ್ಚಿನ ಕುತೂಹಲ ಇದು ಮೂಡಿಸಲಿದೆ" ಎನ್ನುತ್ತಾರೆ ತರುಣ್. 
ದ್ವಾರಕೀಶ್ ಚಿತ್ರ ನಿರ್ಮಾಣ ಸಂಸ್ಥೆಯ ೫೦ ನೆಯ ಚಿತ್ರ ಇದಾಗಿದ್ದು, ಪ್ರೇಮ್, ವಿಜಯ್ ರಾಘವೇಂದ್ರ, ದಿಗಂತ್, ಪ್ರಜ್ವಲ್, ಐಂದ್ರಿತಾ ರೇ, ಪ್ರಿಯಾಮಣಿ, ಭಾವನಾ, ದೀಪಾ ಸನ್ನಿಧಿ ಹೀಗೆ ದೊಡ್ಡ ತಾರಾದಂಡೆ ಅಭಿನಯಿಸಿದ್ದು, ದರ್ಶನ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾನ್ವಿತಾ ಹರೀಶ್ ಮತ್ತು ಕಾಶಿನಾಥ್ ಕೂಡ ನಟಿಸಿರುವ ಈ ಚಿತ್ರಕ್ಕೆ ತರುಣ್ ಅವರು ೨೫ ವಿಭಿನ್ನ ತಂತ್ರಜ್ಞರನ್ನು ಕೂಡ ಒಳಗೊಂಡಿದ್ದಾರೆ.
'ಸುಂದರಾಂಗ ಜಾಣ' ಮತ್ತು 'ಕಿರಿಕ್ ಪಾರ್ಟಿ'ಯಂತೆಯೇ 'ಚೌಕ' ಕ್ರಿಸ್ಮಸ್ ಸಮಯದಲ್ಲಿ ಡಿಸೆಂಬರ್ ೨೩ ರ ಬಿಡುಗಡೆಗೆ ಎದುರು ನೋಡುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.