

ಚೆನ್ನೈ: ಬಾಹುಬಲಿ ಚಿತ್ರಕ್ಕಾಗಿ ಭಾರೀ ಕಸರತ್ತು ನಡೆಸಿರುವ ಬಲ್ಲಾಳ ದೇವ ಪಾತ್ರದ ರಾಣಾ ದಗ್ಗುಬಾಟಿ ಬಲ್ಲಾಳ ದೇವ ಯುವಕನ ಪಾತ್ರಕ್ಕಾಗಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ.
ಬಾಹುಬಲಿ ಮೊದಲ ಭಾಗಕ್ಕಾಗಿ ಸುಮಾರು 108-110 ಕೆಜಿಗೆ ಹೆಚ್ಚಿಸಿಕೊಂಡು ದೇವನ್ನು ಕಟ್ಟುಮಸ್ತಾಗಿ ಇಟ್ಟುಕೊಂಡಿದ್ದ ರಾಣಾ ದಗ್ಗುಬಾಟಿ ಇದೀಗ ಯುವಕ ಬಲ್ಲಾಳ ದೇವನಿಗಾಗಿ 92-93 ಕೆಜಿಗೆ ತೂಕ ಇಳಿಸಿಕೊಂಡಿದ್ದಾರೆ.
ಪಾತ್ರಕ್ಕೆ ತಕ್ಕಂತೆ ತಮ್ಮನ್ನು ಬದಲಾಯಿಸಿಕೊಳ್ಳುವ ರಾಣಾ ಬಾಹುಬಲಿ: ದ ಕನ್‌ಕ್ಲೂಷನ್ ಗಾಗಿ ದೇಹವನ್ನು ಹುರಿಗೊಳಿಸಿದ್ದು ನವ ಯುವಕನಂತೆ ಕಾಣಿಸಿಕೊಂಡಿದ್ದಾರೆ. ರಾಣಾ ದಗ್ಗುಬಾಟಿ ತಮ್ಮ ಇತ್ತೀಚಿನ ಫೋಟೋವೊಂದನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ.
ಬಾಹುಬಲಿ ಚಿತ್ರದಲ್ಲಿ ಖಳನಟ ಪಾತ್ರದಲ್ಲಿ ನಟಿಸಿರುವ ರಾಣಾ ದಗ್ಗುಬಾಟಿ ಬಾಹುಬಲಿ: ದ ಕನ್‌ಕ್ಲೂಷನ್ ನಲ್ಲಿ ತಮ್ಮ ವಿಶ್ವರೂಪವನ್ನು ತೋರಿಸಲಿದ್ದಾರೆ. ಮೊದಲ ಭಾಗದಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಕೊಲ್ಲುವ ಮೂಲಕ ಅಂತ್ಯಗೊಳಿಸಿ ಚಿತ್ರರಸಿಕರಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದೇಕೆ ಎಂಬ ಪ್ರಶ್ನೆಯನ್ನು ಬಿತ್ತಿದ್ದ ನಿರ್ದೇಶಕ ಎಸ್ಎಸ್ ರಾಜಮೌಳಿ ಬಾಹುಬಲಿ: ದ ಕನ್‌ಕ್ಲೂಷನ್ ನಲ್ಲಿ ಈ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ.