ಮದುವೆ ಫೋಟೋ ವೈರಲ್: ನಟಿ ಶುಭಾ ಪೂಂಜಾ, ನಾಗೇಂದ್ರ ಪ್ರಸಾದ್ ಸ್ಪಷ್ಟನೆ

ನಟಿ ಶುಭಾ ಪೂಂಜಾ ಹಾಗೂ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಅವರ ವಿವಾಹದ ಫೋಟೋ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ...
ಶುಭಾ ಪೂಂಜಾ
ಶುಭಾ ಪೂಂಜಾ

ಬೆಂಗಳೂರು: ನಟಿ ಶುಭಾ ಪೂಂಜಾ ಹಾಗೂ ಚಿತ್ರ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಅವರ ವಿವಾಹದ ಫೋಟೋ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ.

ಅಭಿಮಾನಿಯೊಬ್ಬರು ಶುಭಾ ಮತ್ತು ನಾಗೇಂದ್ರ ಪ್ರಸಾದ್ ಅವರ ವಿವಾಹದ ಫೋಟೋವನ್ನು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿ ಹ್ಯಾಪಿ ಮ್ಯಾರಿಡ್ ಲೈಫ್ ಎಂದು ಶುಭಾಶಯ ಕೋರಿದ್ದಾರೆ.

ಶುಭಾ ಮತ್ತು ನಾಗೇಂದ್ರ ಪ್ರಸಾದ್ ಈ ಫೋಟೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ, ಇನ್ನೂ ಟೈಟಲ್ ಇಡದ ಚಿತ್ರದ ವಿವಾಹದ ಶೂಟಿಂಗ್ ನಲ್ಲಿ ನಾವಿಬ್ಬರು ಪಾಲ್ಗೊಂಡಿದ್ದೆವು. ಆ ವೇಳೆಯ ಫೋಟೊವನ್ನು ಯಾರೋ ಕಿಡಿಗೇಡಿಗಳು ಬಳಸಿಕೊಂಡು ಈ ರೀತಿ ಮಾಡಿದ್ದಾರೆ. ನಮ್ಮಿಬ್ಬರಿಗೂ ಮದುವೆಯಾಗಿಲ್ಲ, ಈ ಸಂಬಂಧ ದೂರು ದಾಖಲಿಸುವುದಾಗಿ ನಾಗೇಂದ್ರ ಪ್ರಸಾದ್ ಸ್ಪಷ್ಟ ಪಡಿಸಿದ್ದಾರೆ. ನಮ್ಮ ಮದುವೆಯಾಗಿಲ್ಲ, ಇದು ಸಿನಿಮಾ ಶೂಟಿಂಗ್ ನ ಚಿತ್ರ ಎಂದು ಶುಭಾ ಪೂಂಜಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com