ಮುಕುಂದಾ ಮುರಾರಿಗೆ ನಿದ್ದೆಗೆಡಿಸಿದ ಸಂತು ಸ್ಟ್ರೈಟ್ ಬಾಲ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಂತು ಸ್ಟ್ರೈಟ್ ಫಾರ್ವರ್ಡ್ ಹಾಗೂ ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮುಕುಂದಾ ಮುರಾರಿ ಚಿತ್ರಗಳು...
ಯಶ್, ಉಪೇಂದ್ರ, ಸುದೀಪ್
ಯಶ್, ಉಪೇಂದ್ರ, ಸುದೀಪ್
Updated on: 
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಂತು ಸ್ಟ್ರೈಟ್ ಫಾರ್ವರ್ಡ್ ಹಾಗೂ ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮುಕುಂದಾ ಮುರಾರಿ ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದು, ಸಂತು ಚಿತ್ರದ ಒಂದು ಡೈಲಾಗ್ ಮುಕುಂದಾ ಮುರಾರಿ ನಿದ್ದೆಗೆಡಿಸಿದೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. 

ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಈ ಟ್ರೈಲರ್ ನಲ್ಲಿ ಯಶ್ ಹೊಡೆದಿರುವ ಒಂದು ಡೈಲಾಗ್ ಇದೀಗ ಸ್ಯಾಂಡಲ್ ವುಡ್ ನ ಖ್ಯಾತ ನಟರ ಕೋಪಕ್ಕೆ ಕಾರಣವಾಗಿದೆ. ಯಶ್ ಟ್ರೈಲರ್ ನಲ್ಲಿ ತಲ್ವಾರ್ ಹಿಡ್ಕೊಂಡು ತಲೆ ತೆಗಿತೀನಿ ಅಂದೋರ್ ಬಗ್ಗೇನೆ ತಲೆ ಕೆಡಿಸ್ಕೊಂಡಿಲ್ಲ, ಇನ್ ನೀವ್ ಏನ್ರೋ ಚಿಕ್ ಮಕ್ಕಳ್ ತರ ವಿಕೆಟ್ ಬ್ಯಾಟ್ ಹಿಡ್ಕೊಂದು ಬಂದಿದ್ದೀರಾ? ಎಂಬ ಡೈಲಾಗ್ ಹೊಡೆದಿದ್ದಾರೆ. ಇದಕ್ಕೆ ಉಪೇಂದ್ರ ಕಿಚಾಯಿಸಿ ಒಂದು ಟ್ವೀಟ್ ಮಾಡಿದ್ದಾರೆ. 

ಉಪೇಂದ್ರ ಅವರು ಕಿಚ್ಚ ಸುದೀಪ್ ಗೆ ಟ್ವೀಟರ್ ನಲ್ಲಿ ಪ್ರಶ್ನೆಯೊಂದನ್ನು ಕೇಳಿದ್ದರು. ನಾವಿಬ್ರೂ ಸೇರಿ ಒಂದು ಚಿತ್ರ ಮಾಡಿದ್ವಿ, ಅದರಲ್ಲಿ ಒಬ್ರು ಬ್ಯಾಟ್, ಒಬ್ರು ವಿಕೆಟ್ ಅಂತ ಎಲ್ಲೊ ಒಂದ್ಕಡೆಯಿಂದ ಕೇಳ್ಪಟ್ಟೆ, ನಮ್ಮಿಬ್ಬರ ಮಧ್ಯೆ ಬ್ಯಾಟ್ ಯಾರು? ವಿಕೆಟ್ ಯಾರು? ಆನ್ಸರ್ ಮಾಡಿ ಎಂದು ಹೇಳಿದ್ದರು.
 

ಇದಕ್ಕೆ ಪ್ರತಿಯಾಗಿ ಸುದೀಪ್ ಉಪ್ಪಿ ಸರ್, ಕ್ರಿಕೆಟ್ ನಲ್ಲಿ ಬಾಲ್ ತುಂಬಾ ಮುಖ್ಯ. ಬಾಲ್ ಯಾರು ಅಂತ ಹೇಳಿ, ಆವಾಗ ವಿಕೆಟ್ ಯಾರು? ಬ್ಯಾಟ್ ಯಾರು ಅಂಥ ನಾನೇ ಹೇಳ್ತಿನಿ ಎಂದಿದ್ದಾರೆ. 

ಇದಕ್ಕೆ ಉತ್ತರವಾಗಿ ಉಪ್ಪಿ, ಸುದೀಪ್ ಆ ಬಾಲ್ ಯಾರು ಅಂತ ನೀವು ಕೇಳ್ತಾ ಇದ್ದೀರಾ, ಮೊದಲು ಆ ಬಾಲ್ ಹಾರ್ಡ್ ಬಾಲಾ, ಟೆನಿಸ್ ಬಾಲಾ, ಲೆದರ್ ಬಾಲಾ ಅತ್ವಾ ಟುಸ್ ಬಾಲಾ ಅಂತ ಹೇಳಿ, ಆಮೇಲೆ ಆ ಬಾಲ್ ಯಾರು ಅಂತ ಹೇಳ್ತಿನಿ, ನೊದ ಬಾಲ್ ಈಸ್ ಇನ್ ಯುವರ್ ಕೋರ್ಟ್ ಎಂದು ಮರು ಪ್ರಶ್ನೆ ಎಸೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com