ಸೋನು ಗೌಡ ಈಗ 'ಚಂಬಲ್' ರಾಣಿ

'ಸವಾರಿ - 2' ಹಾಗೂ 'ಪೃಥ್ವಿ' ಸಿನಿಮಾಗಳ ನಿರ್ದೇಶಕ ಜಾಕೋಬ್ ವರ್ಗೀಸ್ ಅವರು ಸತೀಶ್‌ ನೀನಾಸಂ ಅಭಿನಯದ....
ಸೋನು ಗೌಡ
ಸೋನು ಗೌಡ
Updated on
'ಸವಾರಿ - 2' ಹಾಗೂ 'ಪೃಥ್ವಿ' ಸಿನಿಮಾಗಳ ನಿರ್ದೇಶಕ ಜಾಕೋಬ್ ವರ್ಗೀಸ್ ಅವರು ಸತೀಶ್‌ ನೀನಾಸಂ ಅಭಿನಯದ ತಮ್ಮ ಹೊಸ ಚಿತ್ರ ಚಂಬಲ್ ಗೆ ರಾಣಿ ಯಾರು ಎಂಬುದನ್ನು ಬಹಿರಂಗಪಡಿಸಿದ್ದು, ಸೋನು ಗೌಡ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಸೋನು ಅವರೇ ಚಂಬಲ್ ಕಣಿವೆಯ ರಾಣಿಯಾಗಿದ್ದು, ಇದು ನಮ್ಮ ತಂಡಕ್ಕೆ ಮಾತ್ರ ಗೊತ್ತಿತ್ತು ಎಂದು ನಿರ್ದೇಶಕರು ತಿಳಿಸಿದ್ದಾರೆ.
ಜಾಕೋಬ್ ಅವರು ಚಿತ್ರದ ನಾಯಕಿಯ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡದೆಯೇ ಚಿತ್ರದ ಚಿತ್ರೀಕರಣವನ್ನು ಬಹುತೇಕ ಮುಗಿಸಿದ್ದಾರೆ. ಯೂ ಟರ್ನ್ ಖ್ಯಾತಿ ರೋಜರ್ ನಾರಾಯಣ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಚಂಬಲ್ ಕಣಿವೆಗೂ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಚಿತ್ರದ ಕಥೆಗೆ ಆ ಹೆಸರು ಹೊಂದಿಕೆಯಾಗಿದ್ದರಿಂದ ಇಡಲಾಗಿದೆ ಅಷ್ಟೆ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ಇನ್ನು ಸೋನು ಅವರು ಕನ್ನಡ ಹಾಗೂ ತಮಿಳು ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದು, ಇತ್ತೀಚಿಗಷ್ಟೆ ಶರಾವತಿ ತೀರದಲ್ಲಿ ಹಾಗೂ ಕವಲಾಯಿ ವೆಂದಮ್ ಚಿತ್ರಗಳ ಚಿತ್ರೀಕರಣ ಮುಗಿಸಿದ್ದಾರೆ. ಸದ್ಯ ‘ಹ್ಯಾಪಿ ನ್ಯೂ ಇಯರ್’ನಲ್ಲಿ ಬ್ಯುಸಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com