ಪುನೀತ್ 25ನೇ ಚಿತ್ರ ಬಿಡುಗಡೆಗೆ 'ದೊಡ್ಮನೆ' ಬಿರಿಯಾನಿ ಜೊತೆ ರಾಜ್ ಕುಮಾರ್ ಲಡ್ಡು

ಸೆಪ್ಟಂಬರ್ 30 ರಂದು ಸೂರಿ ನಿರ್ದೇಶನದ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 25 ನೇ ಚಿತ್ರ ದೊಡ್ಮನೆ ಹುಡ್ಗ ರಾಜ್ಯಾದ್ಯಂತ
ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್

ಬೆಂಗಳೂರು: ಸೆಪ್ಟಂಬರ್ 30 ರಂದು ಸೂರಿ ನಿರ್ದೇಶನದ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 25 ನೇ ಚಿತ್ರ ದೊಡ್ಮನೆ ಹುಡ್ಗ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ದೊಡ್ಮನೆ ಹುಡುಗ ಚಿತ್ರ ಬಿಡುಗಡೆಯಾಗುವ ಮುಖ್ಯ ಥಿಯೇಟರ್ ನಲ್ಲಿ ಡೊಡ್ಮನೆ ಬಿರಿಯಾನಿ ಮತ್ತು ರಾಜ್ ಕುಮಾರ್ ಲಡ್ಡು ಹಂಚಲು ಪುನೀತ್ ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.

ಚಾಮರಾಜಪೇಟೆಯ ಗಣೇಶ್ ಸ್ವೀಟ್ಸ್ ಡಾ. ರಾಜ್ ಕುಮಾರ್ ಲಡ್ಡುಗಳನ್ನು ಪ್ರೇಕ್ಷಕರಿಗೆ ನೀಡಲಿದೆ.ಇನ್ನೂ ಪುನೀತ್ ಅಭಿಮಾನಿಗಳು ದೊಡ್ಮನೆ ಬಿರಿಯಾನಿ ಮತ್ತು ಹೂವಿನ ಹಾರಕ್ಕೆ ಸುಮಾರು 25 ಲಕ್ಷ ರು ಹಣ ಖರ್ಚು ಮಾಡಿದ್ದಾರೆ.

ರಾಜ್ ಕುಮಾರ್ ಸ್ವೀಟ್ ಬಗ್ಗೆ ತಿಳಿದಿದೆ. ಆದರೆ ಬಿರಿಯಾನಿ ಏಕೆ ಎಂಬ ಪ್ರಶ್ನೆಗೆ ನಿರ್ದೇಶಕ ಸೂರಿ ಉತ್ತರಿಸಿದ್ದಾರೆ. ದೊಡ್ಮನೆ ಹುಡುಗ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರದ್ದು ರಸ್ತೆ ಬದಿಯ ಅಂಗಡಿಯಲ್ಲಿ ಬಿರಿಯಾನಿ ಮಾಡಿ ಮಾರಾಟ ಮಾಡುವ ಪಾತ್ರ, ಹೀಗಾಗಿ ಪ್ರೇಕ್ಷಕರಿಗೆ ದೊಡ್ಮನೆ ಬಿರಿಯಾನಿ ಹೆಸರಲ್ಲಿ ಬಿರಿಯಾನಿ ನೀಡಲಾಗುವುದು ಎಂದು ಹೇಳಿದ್ದಾರೆ,

ಪುನೀತ್ ರಾಜ್ ಕುಮಾರ್, ರಾಧಿಕಾ ಪಂಡಿತ್, ಅಂಬರೀಷ್ ಅಭಿನಯದ ದೊಡ್ಮನೆ ಹುಡುಗ ಚಿತ್ರಸುಮಾರು 500 ಚಿತ್ರ ಮಂದಿರಗಳಲ್ಲಿ ಸೆಪ್ಟಂಬರ್ 30 ರಂದು ರಿಲೀಸ್ ಆಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com