

ಮುಂಬೈ: ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರ ಜೀವನಾಧರಿತ ಚಿತ್ರ ಶೀಘ್ರದಲ್ಲೇ ತೆರೆ ಮೇಲೆ ಬರಲಿದ್ದು, ಖ್ಯಾತ ಬಾಲಿವುಡ್ ನಟ ಸೋನು ಸೂದ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ಮತ್ತೋರ್ವ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರ ಜೀವನಾಧರಿತ ಚಿತ್ರ ಸೆಟ್ಟೇರುವ ಕುರಿತು ಮಾಹಿತಿಗಳು ಬಂದಿದ್ದವು. ಖ್ಯಾತ ನಟಿ ಶ್ರದ್ಧಾ ಕಪೂರ್ ಅವರು ಸೈನಾ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ನಲ್ಲಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಸೈನಾ ನೆಹ್ವಾಲ್ ಅವರ ಜೀವನಾಧರಿತ ಚಿತ್ರ ನಿರ್ಮಾಣ ಮಾಡುವ ಕುರಿತು ನಟ ಸೋನು ಸೂದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೀವನ ಬೆಳ್ಳಿ ತೆರೆ ಮೇಲೆ ಬರಲು ಸಿದ್ಧತೆ ನಡೆಯುತ್ತಿದೆ. ನಟ ಸೋನು ಸೂದ್ ಅವರು ಪಿವಿ ಸಿಂಧು ಜೀವನಾಧಾರಿತ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ.
2016 ರ ಒಲಂಪಿಕ್ನಲ್ಲಿ ಬೆಳ್ಳಿ ಪದಕ ವಿಜೇತೆಯಾದ ಸಿಂಧು ಹಾದಿ ಸುಗಮವೇನು ಇರಲಿಲ್ಲ. ಕಠಿಣ ಪರಿಶ್ರಮದಿಂದ ವಿಶ್ವಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ಸಿಂಧು ಅವರ ಜೀವನದ ಕಠಿಣ ಸನ್ನಿವೇಶ ಹಾಗೂ ಬೆಳ್ಳಿಪದಕ ಪಡೆಯಲು ಪಟ್ಟ ಶ್ರಮವನ್ನು ಸಿನಿಮಾದಲ್ಲಿ ತೋರಿಸಲಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ನಟ ಹಾಗೂ ನಿರ್ಮಾಪಕ ಸೋನು ಸೂದ್, ಪಿವಿ ಸಿಂಧು ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಸಿಂಧು ತಮ್ಮ ದೊಡ್ಡ ಕನಸನ್ನು ಹೇಗೆ ಸಾಕಾರಗೊಳಿಸಿದರು ಎಂಬುದು ಚಿತ್ರದ ಕಥೆಯಾಗಿರಲಿದೆ. ಪ್ರತಿಯೊಬ್ಬರು ಈ ಸಿನಿಮಾನವನ್ನು ನೊಡಲೇಬೇಕು. ಎಲ್ಲರಿಗೂ ಈ ಚಿತ್ರ ಖಂಡಿತಾ ಇಷ್ಟವಾಗಲಿದೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಂಧು ತಮ್ಮ ಜೀವನ ಕುರಿತು ಚಿತ್ರ ನಿರ್ಮಿಸುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಚಿತ್ರಕ್ಕಾಗಿ ತೀವ್ರ ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.
2016 ರ ಒಲಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಪಿವಿ ಸಿಂಧು ಬೆಳ್ಳಿ ಪದಕ ಪಡೆದಿದ್ದರು.