ಕಮಲ್ ಹಾಸನ್, ಮೋಹನ್ ಲಾಲ್: ಮತ್ತೆ ಒಟ್ಟಿಗೆ ಅಭಿನಯ?

ಸಿನಿ ವಲಯದಲ್ಲಿ ಹಲವು ದಿನಗಳಿಂದ ಕೇಳಿಬರುತ್ತಿರುವ ಈ ಸುದ್ದಿ ನಿಜವಾಗುವ ಸಾಧ್ಯತೆ ದಟ್ಟವಾಗಿದೆ...
ಕಮಲ್ ಹಾಸನ್-ಮೋಹನ್ ಲಾಲ್
ಕಮಲ್ ಹಾಸನ್-ಮೋಹನ್ ಲಾಲ್
Updated on
ಸಿನಿಮಾ ಪ್ರಿಯರಲ್ಲಿ ಹಲವು ದಿನಗಳಿಂದ ಕೇಳಿಬರುತ್ತಿರುವ ಈ ಸುದ್ದಿ ನಿಜವಾಗುವ ಸಾಧ್ಯತೆಯಿದೆ. ಮಲಯಾಳಂನ ಖ್ಯಾತ ನಟ ಮೋಹನ್ ಲಾಲ್ ಮತ್ತು ದಕ್ಷಿಣ ಭಾರತದ ಖ್ಯಾತ ನಟ ಕಮಲ್ ಹಾಸನ್ ಒಂದಾಗಿ ನಟಿಸುವ ಸಾಧ್ಯತೆ ದಟ್ಟವಾಗಿದೆ. ಹಿಂದಿಯಲ್ಲಿ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ನಟಿಸಿದ್ದ 2012ರಲ್ಲಿ ತೆರೆಕಂಡ ಒ ಮೈ ಗಾಡ್ ಚಿತ್ರದಲ್ಲಿ ಈ ಇಬ್ಬರು ನಟಿಸಿ ರಂಜಿಸಲಿದ್ದಾರೆ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿದೆ.
ಮೂಲಗಳ ಪ್ರಕಾರ ಮೂಲ ಹಿಂದಿ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದ ದೇವರ ಪಾತ್ರದಲ್ಲಿ ಮೋಹನ್ ಲಾಲ್ ನಟಿಸಿದರೆ, ಚುರುಕು ಉದ್ಯಮಿಯಾಗಿ ಕಮಲ್ ಹಾಸನ್ ನಟಿಸಲಿದ್ದಾರೆ.
ಸ್ವತಃ ಕಮಲ್ ಹಾಸನ್ ರೇ ಚಿತ್ರವನ್ನು ನಿರ್ದೇಶಿಸಿ ನಿರ್ಮಿಸಲಿದ್ದಾರೆ.
ಈ ಹಿಂದೆ 2009ರಲ್ಲಿ ಇವರಿಬ್ಬರೂ ಉನ್ನೈ ಪೊಲೈ ಉರುವನ್ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು.
ವೆಡ್ನೆಸ್ ಡೇ ಚಿತ್ರದ ರಿಮೇಕ್ ಆಗಿರುವ ಉನ್ನೈ ಸೂಪರ್ ಹಿಟ್ ಆಗಿತ್ತು. ಅದರಲ್ಲಿ ಮೋಹನ್ ಲಾಲ್ ಪೊಲೀಸ್ ಆಗಿ, ಕಮಲ್ ಹಾಸನ್ ಪ್ರಮುಖ ಪಾತ್ರ ಮಾಡಿದ್ದರು. ಮೂಲ ಚಿತ್ರದಲ್ಲಿ ಕಮಲ್ ಹಾಸನ್ ಪಾತ್ರವನ್ನು ನಾಸಿರುದ್ದೀನ್ ಶಾ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com