ಟ್ಯೂಬ್ ಲೈಟ್ ಸಿನಿಮಾ ವಿತರಕರ ನಷ್ಟ ಭರಿಸಲು ಮುಂದಾದ ಸಲ್ಲು: 35 ಕೋಟಿ ರು. ನೀಡಲು ನಿರ್ಧಾರ

ಕಬೀರ್ ಖಾನ್ ಹಾಗೂ ಸಲ್ಮಾನ್ ಖಾನ್ ಜೋಡಿಯ ಟ್ಯೂಬ್ ಲೈಟ್ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿತ್ತು. ಆದರೆ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ...
ಸಲ್ಮಾನ್ ಖಾನ್
ಸಲ್ಮಾನ್ ಖಾನ್
Updated on
ನವದೆಹಲಿ: ಕಬೀರ್ ಖಾನ್ ಹಾಗೂ ಸಲ್ಮಾನ್ ಖಾನ್ ಜೋಡಿಯ ಟ್ಯೂಬ್ ಲೈಟ್ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿತ್ತು.  ಆದರೆ  ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. 
ನಷ್ಟದ ಹಿನ್ನೆಲೆಯಲ್ಲಿ ಹಲವು ವಿತರಕರು ಹಾಗೂ ನಿರ್ಮಾಪಕರು ಸಲ್ಮಾನ್ ಖಾನ್ ನಿಂದ ಹಣ ವಾಪಸ್ ಕೇಳಿದ್ದರು,   ಹೀಗಾಗಿ ಉಂಟಾಗಿರುವ ನಷ್ಟವನ್ನು ಭರಿಸಲು ಸಲ್ಮಾನ್ ಖಾನ್ ಒಪ್ಪಿದ್ದಾರೆ. 35 ಕೋಟಿ ರು. ಹಣವನ್ನು ವಿತರಕರಿಗೆ ಸಲ್ಮಾನ್ ಖಾನ್ ನೀಡಲಿದ್ದಾರೆ ಎಂದು ವ್ಯಾಪಾರ ವಿಶ್ಲೇಷಕ ಕೋಮಲ್ ನಹ್ತಾ ಟ್ವೀಟ್ ಮಾಡಿದ್ದಾರೆ.
ಸಿನಿಮಾಗಾಗಿ ವಿತರಕರು ಖರ್ಚು ಮಾಡಿರುವ ಒಟ್ಟು ಹಣದಲ್ಲಿ ಅರ್ಧದಷ್ಟು ಮೊತ್ತವನ್ನು ಸಲ್ಮಾನ್ ಭರಿಸಲಿದ್ದಾರೆ. 
ಈದ್ ಹಬ್ಬದ ಸಮಯದ ವೇಳೆ ಟ್ಯೂಬ್ ಲೈಟ್ ರಿಲೀಸ್ ಆಗಿದ್ದು ಮೊದಲ ದಿನ 21.15 ಕೋಟಿ ರು ಗಳಿಕೆಯಾಗಿತ್ತು, ಮೊದಲ ವಾರಂತ್ಯದಲ್ಲಿ ಕೇವಲ 64.77 ಕೋಟಿ ರು ಹಣ ಗಳಿಸಲು ಮಾತ್ರ ಟ್ಯೂಬ್ ಲೈಟ್ ಶಕ್ತವಾಗಿತ್ತು. ಜುಲೈ ತಿಂಗಳ ಅಂತ್ಯದಲ್ಲಿ ಹಣ ನೀಡುವುದಾಗಿ ಸಲ್ಮಾನ್ ಘೋಷಿಸಿದ್ದರು, ಆದರೆ ಸದ್ಯ 2017ಗ ಐಫಾ ಪ್ರಶಸ್ತಿ ಸಮಾರಂಭದಲ್ಲಿ ಬ್ಯುಸಿಯಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com