ಕುರುಕ್ಷೇತ್ರ: ಅರ್ಜುನನಾಗಿ ಬಾಲಿವುಡ್ ನಟ ಸೋನು ಸೂದ್?

ಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರವಾದ ಕುರುಕ್ಷೇತ್ರ ಸಿನಿಮಾ ಪ್ರತಿದಿನ ಒಂದಲ್ಲ ಒಂದು ಸುದ್ದಿ ಮಾಡುತ್ತಲೆ ಇದೆ, ಪಾತ್ರಗಳಿಗೆ ಕಲಾವಿದರ ...
ಸೋನು ಸೂದ್
ಸೋನು ಸೂದ್
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರವಾದ  ಕುರುಕ್ಷೇತ್ರ ಸಿನಿಮಾ ಪ್ರತಿದಿನ ಒಂದಲ್ಲ ಒಂದು ಸುದ್ದಿ ಮಾಡುತ್ತಲೆ ಇದೆ, ಪಾತ್ರಗಳಿಗೆ ಕಲಾವಿದರ ಬಗ್ಗೆ ಹೊಸ ಹೊಸ ಮಾಹಿತಿಗಳು ಹೊರ ಬರುತ್ತಲೇ ಇವೆ.
ಕುರುಕ್ಷೇತ್ರದಲ್ಲಿ ಉತ್ತರೆಯಾಗಿ ಆದಿತಿ ಆರ್ಯ ನಟಿಸುತ್ತಾರೆ ಎಂದು ಇತ್ತೀಚೆಗಷ್ಟೇ ಸಿಟಿ ಎಕ್ಸ್ ಪ್ರೆಸ್ ವರದಿ ಮಾಡಿತ್ತು. ಸದ್ಯದ ಮತ್ತೊಂದು ಹೊಸ ವಿಷವೆಂದರೇ ಈ ಪೌರಾಣಿಕ ಸಿನಿಮಾದಲ್ಲಿ ಬಾಲಿವುಡ್ ನಟ ಸೋನು ಸೂದ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ನಾಗಣ್ಣ ನಿರ್ದೇಶನದ ಕುರುಕ್ಷೇತ್ರ ತಂಡ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ,  ಆದರೆ ಮೂಲಗಳ ಪ್ರಕಾರ ಸೋನು ಸೂದ್ ಅರ್ಜುನನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. 
ಶೂಟಿಂಗ್ ಸೆಟ್ ನಲ್ಲಿ ಕಾಣಿಸಿಕೊಂಡಿರುವ ಸೋನು ಸೂದ್, ಫೋಟೋ ಶೂಟ್ ಪೂರ್ಣಗೊಳಿಸಿದ್ದು,  ಒಂದೆರಡು ದಿನಗಳಲ್ಲಿ ಹೈದರಾಬಾದ್ ನ ಶೂಟಿಂಗ್ ಸೆಟ್ ಗೆ ಆಗಮಿಸಲಿದ್ದಾರೆ.  ದರ್ಶನ್ ಪ್ರಧಾನವಾದ ದುರ್ಯೋದನನ ಪಾತ್ರ ಮಾಡಲಿದ್ದಾರೆ. 
ರವಿಚಂದ್ರನ್, ಅರ್ಜುನ್ ಸರ್ಜಾ, ಅಂಬರೀಷ್, ರವಿಶಂಕರ್, ಡ್ಯಾನಿಶ್ ಅಖ್ತರ್ ಸೇರಿದಂತೆ ಹಲವರು ಪೌರಾಣಿಕ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com