ಕೆಜಿಎಫ್' ಭಾರತದಲ್ಲೇ ಅತ್ಯುತ್ತಮ ಸಿನಿಮಾವಾಗಲಿದೆ: ಪ್ರಶಾಂತ್ ನೀಲ್

ಸೋಮವಾರ ರಾತ್ರಿ ಕೆಜಿಎಫ್ ಸಿನಿಮಾದ 2 ನೇ ಪೋಸ್ಟರ್ ರಿಲೀಸ್ ಆಗಿದ್ದು ಮತ್ತಷ್ಟು ಆಸಕ್ತಿ ದಾಯಕವಾಗಿದೆ...
ಕೆಜಿಎಫ್ ಸಿನಿಮಾ ಪೋಸ್ಟರ್
ಕೆಜಿಎಫ್ ಸಿನಿಮಾ ಪೋಸ್ಟರ್
Updated on: 
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಫ್ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ, ದಕ್ಷಿಣ ಭಾರತ ಪ್ರೇಕ್ಷಕರಲ್ಲಿ ಕುತೂಹಲದಿಂದ ಕಾಯುತ್ತಿದ್ದಾರೆ. ಇನ್ನೂ ಸೋಮವಾರ ರಾತ್ರಿ ಕೆಜಿಎಫ್ ಸಿನಿಮಾದ 2 ನೇ ಪೋಸ್ಟರ್ ರಿಲೀಸ್ ಆಗಿದ್ದು ಆಸಕ್ತಿದಾಯಕವಾಗಿದೆ.
ಚಿತ್ರದಲ್ಲಿ ರಾಕಿ ಪಾತ್ರದಲ್ಲಿ ನಟಿಸಿರುವ ಯಶ್ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಆನ್ ಲೈನ್ ನಲ್ಲಿ ಹೊಸ ಟ್ರೆಂಡ್ ಶುರು ಮಾಡಿದೆ.
ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಸ್ಮ್ ಏಕ ಕಾಲಕ್ಕೆ ಕೆಜಿಎಫ್ ಸಿನಿಮಾವನ್ನು ಐದು ಭಾಷೆಗಳಲ್ಲಿ ರಿಲೀಸ್ ಮಾಡುತ್ತಿದೆ, ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. 
ಸದ್ಯ ಚಿತ್ರೀಕರಣಕ್ಕಾಗಿ ಸಿನಿಮಾ ತಂಡ ಮೈಸೂರಿನಲ್ಲಿದೆ, ಇನ್ನು ಒಂದು ತಿಂಗಳ ಕಾಲ ಶೂಟಿಂಗ್ ಮುಂದುವರಿಯಲಿದೆ. 70-80 ದಶಕದ ಕನ್ನಡದ ಸ್ಥಳೀಯ ಕಥೆ ಬೇರೆ ರಾಜ್ಯಗಳ ಪ್ರೇಕ್ಷಕರನ್ನು ಆಕರ್ಷಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ನಿರ್ದೇಶಕ ಪ್ರಶಾಂತ್ ನೀಲ್, ಮ್ಯಾಗ್ನಮ್ ಒಪಸ್ ಅತಿ ದೊಡ್ಡ ಬಜೆಟ್ ನಲ್ಲಿ ಸಿನಿಮಾ ನಿರ್ಮಿಸುತ್ತಿದ್ದು, ಈ ಮೊದಲು ಸ್ಯಾಂಡಲ್ ವುಡ್ ನಲ್ಲಿ ಇಷ್ಟು ಮೊತ್ತದ ಬಜೆಟ್ ಸಿನಿಮಾ ಬಂದಿಲ್ಲ, ಚಿತ್ರಕಥೆ ಅತ್ಯದ್ಭುತವಾಗಿದ್ದು, ಎಲ್ಲಾ ಭಾಷೆಯ ಪ್ರೇಕ್ಷಕರಿಗೂ ಇಷ್ಟವಾಗಲಿದೆ ಎಂದು ಹೇಳಿದ್ದಾರೆ.
ಸಿನಿಮಾದಲ್ಲಿ ಸಾರ್ವತ್ರಿಕವಾಗಿ ಅನ್ವಯವಾಗುವಂತ ವಿಷಯಗಳಿದ್ದು, ಕೆಜಿಎಫ್ ಸಿನಿಮಾ ಇಡಿ ಭಾರತದಲ್ಲೇ ಅತ್ಯುತ್ತಮವಾದ ಸಿನಿಮಾವಾಗಲಿದೆ ಎಂದು ನಿರ್ಮಾಪಕರು ಅಭಿಪ್ರಾಯ ಪಟ್ಟಿದ್ದಾರೆ. ಯಶ್ ಜೊತೆ ಶ್ರೀನಿಧಿ ಶೆಟ್ಟಿ ರಮೇಶ್, ಅಚ್ಯುತ ಕುಮಾರ್ ಮತ್ತ ವಶಿಷ್ಠ ಸಿಂಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com