'ಅಂಬಿ ನಿಂಗ್ ವಯಸ್ಸಾಯ್ತೊ' ಟೀಸರ್ ಗೆ ಅಂಬಿ ಕೈಬರಹದ ಪತ್ರ!

ಅಂಬರೀಶ್, ಸ್ಯಾಂಡಲ್ ವುಡ್ ನ ರೆಬೆಲ್ ಸ್ಟಾರ್ . ಅಂದಿನಿಂದ ಇಂದಿನವರೆಗೂ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ.
ಅಂಬರೀಶ್
ಅಂಬರೀಶ್
Updated on
ಬೆಂಗಳೂರು: ಅಂಬರೀಶ್, ಸ್ಯಾಂಡಲ್  ವುಡ್ ನ ರೆಬೆಲ್ ಸ್ಟಾರ್ . ಅಂದಿನಿಂದ ಇಂದಿನವರೆಗೂ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಇದೀಗ ಸುಮಾರು ಇಪ್ಪತ್ತು ವರ್ಷಗಳ ಬಳಿಕ ಅಂಬರೀಶ್ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂಬಿ  ನಿಂಗ್ ವಯಸ್ಸಾಯ್ತೊ' ಚಿತ್ರದ ಟೀಸರ್ ಇಂದು ಬಿಡುಗಡೆಯಾಗುತ್ತಿದೆ.
ಎರಡು ನಿಮಿಷ ಐದು ಸೆಕೆಂಡ್ ಗಳ ಟೀಸರ್ ನಲ್ಲಿ ಅಂಬರೀಶ್ ಕೈಬರಹದ ಪತ್ರವಿರುವುದು ವಿಶೇಷ. ಅಂಬರೀಶ್ ಚಿತ್ರ ಜೀವನದ ಬಗೆಗೆ ವಿವರಿಸಿರುವ ಈ ಪತ್ರದ ಪ್ರತಿಯನ್ನು ಅವರು ರಾಜಕಾರಣಿಗಳು, ಚಲನಚಿತ್ರ ನಿರ್ಮಾಪಕರು ಸೇರಿದಂತೆ ತಮ್ಮ ಆತ್ಮೀಯರಿಗೆ ಕಳಿಸಿದ್ದಾರೆ. ಇದರ ಡಿಜಿಟಲ್ ಪ್ರತಿಯು ಇಂದು ಸಂಜೆ ವೇಳೆಗೆ ಸಾಮಾಜಿಕ ತಾಣಗಳಲ್ಲಿ ದೊರೆಯಲಿದೆ. 
ಗುರುದಾತ ಗಾಣಿಗ ನಿರ್ದೇಶನದ ’ಅಂಬಿ ನಿಂಗ್ ವಯಸ್ಸಾಯ್ತೊ'  ಕಿಚ್ಚ ಸುದೀಪ್ ಬ್ಯಾನರ್ ಕಿಚ್ಚ ಕ್ರಿಯೇಷನ್ಸ್ ಅಡಿಯಲ್ಲಿ ಮೂಡಿ ಬರುತ್ತಿದೆ.ಇದಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಡಿ.11 ರಂದು ಅಂಬರೀಶ್ ಹಾಗು ಇತರೆ ನಟರು ಲಭ್ಯವಾದೊಡನೆ ಮತ್ತೆ ಚಿತ್ರೀಕರಣ ಮುಂದುವರಿಯಲಿದೆ.ತಮಿಳಿನ  'ಪವರ್‌ ಪಾಂಡಿ' ಚಿತ್ರದ ರೀಮೇಕ್‌ ಇದಾಗಿದ್ದು, ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಜೆಬಿನ್ ಜಾಕೋಬ್ ಛಾಯಾಗ್ರಹಣ ಈ ಚಿತ್ರಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com