ವಿವೇಗಂ ಚಿತ್ರದಲ್ಲಿ ಅಜಿತ್ ಸಿಕ್ಸ್ ಪ್ಯಾಕ್ ದರ್ಶನ

ಕಾಲಿವುಡ್ ನಟ ಅಜಿತ್ ಕುಮಾರ್ ತಮ್ಮ ಮುಂದಿನ ರೋಮಾಂಚಕ-ಸಾಹಸ ಪ್ರಧಾನ ಚಿತ್ರ ವಿವೇಗಂಗಾಗಿ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಂಡಿದ್ದಾರೆ...
ಅಜಿತ್ ಕುಮಾರ್
ಅಜಿತ್ ಕುಮಾರ್
Updated on: 
ಚೆನ್ನೈ: ಕಾಲಿವುಡ್ ನಟ ಅಜಿತ್ ಕುಮಾರ್ ತಮ್ಮ ಮುಂದಿನ ರೋಮಾಂಚಕ-ಸಾಹಸ ಪ್ರಧಾನ ಚಿತ್ರ ವಿವೇಗಂಗಾಗಿ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. 
ಚಿತ್ರದಲ್ಲಿನ ತಮ್ಮ ಸಿಕ್ಸ್ ಪ್ಯಾಕ್ ಪೋಸ್ಟರ್ ಅನ್ನು ಅಜಿತ್ ಕುಮಾರ್ ತಮ್ಮ ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ಸಿಕ್ಸ್ ಪ್ಯಾಕ್ ನಲ್ಲಿ ಅಜಿತ್ ಸಖತ್ ಆ್ಯಂಗ್ರಿಯಾಗಿ ಕಾಣಿಸಿಕೊಂಡಿದ್ದಾರೆ. 
ವೀರಂ ಮತ್ತು ವೇದಾಲಂ ಚಿತ್ರಗಳಲ್ಲಿನ ಶೀರ್ಷಿಕೆಯಂತೆ 'ವಿ' ನಿಂದ ಆರಂಭವಾಗುವ ಶೀರ್ಷಿಕೆಯನ್ನು ಚಿತ್ರಕ್ಕೆ ಇಡಲಾಗಿದೆ. ಈ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದ ಶಿವ ವಿವೇಗಂ ಚಿತ್ರವನ್ನು ನಿರ್ದೇಶಿಸಿದ್ದಾರೆ. 
ಚಿತ್ರದಲ್ಲಿ ಅಜಿತ್ ಕುಮಾರ್ ಗೆ ಜತೆಯಾಗಿ ಕಾಜೋಲ್ ಅಗರವಾಲ್ ಮತ್ತು ಅಕ್ಷರ ಹಾಸನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com