ಧನುಷ್ ನಮ್ಮ ಮಗ: ಪ್ರಮಾಣಪತ್ರ ಸಲ್ಲಿಸಿ, ಸಾಬೀತುಪಡಿಸಲು ಮೇಲೂರು ದಂಪತಿಗೆ ಕೋರ್ಟ್ ಸೂಚನೆ

ನಟ ಧನುಷ್ ತಮ್ಮ ಮಗ ಎಂದು ಮಧುರೈ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದ ಮೇಲೂರು ದಂಪತಿ ಹಾಗೂ ಧನುಷ್ ಪ್ರಮಾಣ ಪ್ರಮಾಣ ಪತ್ರ ಸಲ್ಲಿಸುವಂತೆ ...
ಧನುಷ್
ಧನುಷ್
Updated on: 

ಮಧುರೈ: ನಟ ಧನುಷ್ ತಮ್ಮ ಮಗ ಎಂದು ಮಧುರೈ ಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದ ಮೇಲೂರು ದಂಪತಿ ಹಾಗೂ ಧನುಷ್ ಪ್ರಮಾಣ ಪ್ರಮಾಣ ಪತ್ರ  ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.

ಧನುಷ್ ನಮ್ಮ ಮಗ, ನಮಗೆ ವಯಸ್ಸಾಗಿದ್ದು, ನಟನಾದ ಮೇಲೆ ಧನುಷ್ ನಮಗೆ ಹಣಕಾಸಿನ ಸಹಾಯ ಮಾಡುತ್ತಿಲ್ಲ ಎಂದು ಮೇಲೂರಿನ ಕಾತಿರೇಸನ್ ಮತ್ತು ಮೀನಾಕ್ಷಿ ಎಂಬುವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮಧುರೈ ಮೇಲೂರು ನಿವಾಸಿಗಳಾದ ಆರ್‌.ಕದಿರೇಸನ್‌(60 ವರ್ಷ) ಮತ್ತು ಕೆ.ಮೀನಾಕ್ಷಿ (55 ವರ್ಷ)  ಎಂಬುವರು ನಟ ಧನುಷ್‌ ತಮ್ಮ ಹಿರಿಯ ಮಗ, ಅವನು ಚಿತ್ರರಂಗ ಸೇರಿದ ಮೇಲೆ ನಮ್ಮನ್ನು ಮರೆತು ಬಿಟ್ಟಿದ್ದಾನೆ, ತಾವು ತುಂಬಾ ಕಷ್ಟದಲ್ಲಿದ್ದು, ಆತನಿಂದ ಸಹಾಯ ಕೊಡಿಸುವಂತೆ ದಂಪತಿ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

1985ರ ನವೆಂಬರ್‌ 7ರಂದು ಮಧುರೈನ ರಾಜಾಜಿ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ. ಶಿವಗಂಗಾದಲ್ಲಿ 11ನೇ ತರಗತಿವರೆಗೂ ಶಿಕ್ಷಣ ಪಡೆದಿದ್ದವನು, ಶಾಲೆ ಬಿಟ್ಟು ನಟನೆಗಾಗಿ  ಧನುಷ್‌ ಕೆ.ರಾಜಾ ಎಂದು ಹೆಸರು ಬದಲಿಸಿಕೊಂಡು ಚೆನ್ನೈ ಸೇರಿದ ಎಂದು ದಂಪತಿ ಹೇಳಿದ್ದರು.

ನಾನೊಬ್ಬ ಗೌರವಾನ್ವಿತ ನಟನಾಗಿದ್ದು, ಎಗ್ಮೋರೆಯ ಸರ್ಕಾರಿ ಮಕ್ಕಳ ಆಸ್ಪತ್ರೆಯಲ್ಲಿ ಜುಲೈ 28 1983 ರಲ್ಲಿ ಜನಿಸಿದ್ದೇನೆ. ಕೃಷ್ಣಮೂರ್ತಿ ಮತ್ತು ವಿಜಯಲಕ್ಷ್ಮಿ ನನ್ನ ತಂದೆತಾಯಿ ಎಂದು ಧನುಷ್ ಸ್ಪಷ್ಟ ಪಡಿಸಿದ್ದಾರೆ. ನನ್ನ ಮೊದಲ ಹೆಸರು ವೆಂಕಟೇಶ್ ಪ್ರಭು. 2003 ರಲ್ಲಿ ಸಿನಿಮಾ ರಂಗ ಪ್ರವೇಶಿಸಿದ ನಂತರ ಧನುಷ್ ಕೆ. ರಾಜಾ ಎಂದು ಬದಲಾಯಿತು. ಹೀಗಾಗಿ ಮೇಲೂರು ದಂಪತಿ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಬೇಕೆಂದು ಧನುಷ್ ಕೋರ್ಟ್ ನಲ್ಲಿ ಮನವಿ ಮಾಡಿದ್ದರು.

ಇದಕ್ಕೆ ಪ್ರತಿಯಾಗಿ ಮೇಲೂರು ದಂಪತಿಗಳು ಧನುಷ್ ನಮ್ಮ ಮಗ ಎಂಬುದಕ್ಕೆ ನಮ್ಮ ಬಳಿ ಸಾಕ್ಷಿ ಇದೆ ಎಂದು ಹೇಳಿದ್ದರು,ಹೀಗಾಗಿ ಮಧುರೈ ಕೋರ್ಟ್ ನ ನ್ಯಾಯಮೂರ್ತಿ ಜಿ ಕಾಕೋಳಿಂಗಂ ಎರಡು ಕಡೆಯವರು ತಮ್ಮ ಬಳಿಯಿರುವ ಜನನ ಹಾಗೂ ಶೈಕ್ಷಣಿಕ ಪ್ರಮಾಣಪತ್ರವನ್ನು ಕೋರ್ಟ್ ಗೆ ಸಲ್ಲಿಸುವಂತೆ ಸೂಚಿಸಿ, ಪ್ರಕರಣವನ್ನು ಫೆಬ್ರವರಿ 14 ಕ್ಕೆ ಮುದೂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com