ಪ್ರೇಮಿಗಳ ದಿನದಂದು ಮೊಮ್ಮಗಳ ಜೊತೆ ಕಳೆದ ಬಿಗ್ ಬಿ

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಈ ವರ್ಷ ವ್ಯಾಲೆಂಟೈನ್ಸ್ ಡೇಯನ್ನು ಆಚರಿಸಿದ ರೀತಿ...
ಮೊಮ್ಮಗಳ ಜೊತೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್
ಮೊಮ್ಮಗಳ ಜೊತೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Updated on
ನವದೆಹಲಿ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಈ ವರ್ಷ ವ್ಯಾಲೆಂಟೈನ್ಸ್ ಡೇಯನ್ನು ಆಚರಿಸಿದ ರೀತಿ ಅತ್ಯಂತ ಸುಂದರವಾಗಿತ್ತು ಎನ್ನಬಹುದು. ಮೊಮ್ಮಗಳು ಆರಾಧ್ಯ ಬಚ್ಚನ್ ಜೊತೆ ದಾದಾಜಿ ಅಮಿತಾಬ್ ಬಚ್ಚನ್ ಹೊರಗಡೆ ಸುತ್ತಾಡಲು ಹೋಗಿ ಪಿಜ್ಜಾ ತಿಂದು ಬಂದಿದ್ದಾರೆ.
ಮೆಗಾಸ್ಟಾರ್ ತಮ್ಮ ಬ್ಲಾಗ್ ನಲ್ಲಿ ಪ್ರೇಮಿಗಳ ದಿನವನ್ನು ಕಳೆದ ಬಗೆಯನ್ನು ಸುಂದರವಾಗಿ ಬರೆದುಕೊಂಡಿದ್ದಾರೆ. 
ಇಟಾಲಿಯನ್ ರೆಸ್ಟೋರೆಂಟ್ ನಲ್ಲಿ ಮೊಮ್ಮಗಳು ಪಿಜ್ಜಾ ಬೇಕೆಂದು ಮನೆಯಲ್ಲಿ ಅತ್ಯಂತ ವಿನಮ್ರವಾಗಿ ಕೇಳಿದಳು. ಆಕೆಯ ಆಸೆಯನ್ನು ತೀರಿಸಲು ನಾನು ಮುಂದಾದೆ. ರೆಸ್ಟೋರೆಂಟ್ ಗೆ ಹೋದೆವು. ಮಿಸ್ ಆರಾಧ್ಯ ರೆಸ್ಟೋರೆಂಟ್ ಗೆ ಹೋಗಿ ಗಂಭೀರವಾಗಿ, ಗಲಾಟೆ ಮಾಡದೆ ಟೇಬಲ್ ಮುಂದೆ ಕುಳಿತುಕೊಂಡಳು. ಕಾಲಿನ ಸುತ್ತ ನ್ಯಾಪ್ ಕಿನ್ ಹರಡಿ ವೈಟರ್ ನ ಗಮನ ಸೆಳೆದು ಮೆನು ಆರ್ಡರ್ ಮಾಡಿದಳು. 
ಅವಳಿಗೆ ಪಿಜ್ಜಾ ಯಾವ ರೀತಿ ಬೇಕು ಎಂದು ವಿವರಿಸಿದಳು. ಪಿಜ್ಜಾ ಬಂದಾಗ ಅತ್ಯಂತ ವಿನಮ್ರವಾಗಿ ವೈಟರ್ ಗೆ ಧನ್ಯವಾದ ಹೇಳಿದಳು. ನಂತರ ಅತ್ಯಂತ ಇಂಪಾಗಿ ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ನುಡಿದಳು ಎಂದು ವಿವರಿಸುತ್ತಾರೆ ಬಿಗ್ ಬಿ.
5 ವರ್ಷ ಹರೆಯದ ಆರಾಧ್ಯಳ ಪರಿಪಕ್ವತೆಯನ್ನು ಮೆಚ್ಚಿಕೊಂಡ ಹಿರಿಯ ನಟ ತಾನು ಆಕೆಗೆ ಧನ್ಯವಾದ ಹೇಳಬೇಕೆಂದು ಮತ್ತು  ಅವಳು ಯಾಕೆ ಹೇಳಬಾರದೆಂದು ಆರಾಧ್ಯ ಹೇಳಿರುವುದನ್ನು ಹೀಗೆ ವಿವರಿಸುತ್ತಾರೆ.
ಯಾರೂ ದಾದಾಜಿಗೆ ಥ್ಯಾಂಕ್ಸ್ ಹೇಳಬಾರದು, ನನಗೆ ಹೇಳಬೇಕು, ಏಕೆಂದರೆ ಹೊರಗೆ ಹೋಗೋಣ ಎಂದು ನಾನಲ್ಲವೇ ಹೇಳಿದ್ದು, ನನ್ನಿಂದಾಗಿ ಇಂದು ಎಲ್ಲರೂ ರೆಸ್ಟೋರೆಂಟ್ ಗೆ ಹೋಗುವಂತಾಯಿತು ಎಂದು ಹೇಳುತ್ತಾಳೆ. 5 ವರ್ಷದವಳಾದರೂ 50 ವರ್ಷದವಳಂತೆ ಮಾತನಾಡುತ್ತಾಳೆ ಎಂದು ಬಿಗ್ ಬಿ ಖುಷಿಯಿಂದ ಹೇಳುತ್ತಾರೆ.
ಅಮಿತಾಬ್ ಬಚ್ಚನ್ ರಾಮ್ ಗೋಪಾಲ್ ವರ್ಮಾ ಅವರ ಸರ್ಕಾರ್ 3 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com