'ಟಗರು' ಸಿನೆಮಾದ ಮುಂದಿನ ಹಂತದ ಚಿತ್ರೀಕರಣ ಮಾರ್ಚ್ ೩ ರಿಂದ ಪ್ರಾರಂಭವಾಗಲಿದ್ದು ಇದಕ್ಕೆ ಸಿದ್ಧವಾಗುತ್ತಿರುವ ಸೂರಿ, ನಟಿ ಚಿತ್ರತಂಡವನ್ನು ಸೇರುತ್ತಿರುವುದನ್ನು ಧೃಢೀಕರಿಸುತ್ತಾರೆ. "ನಾವು ಅವರ ಭಾಗದ ಚಿತ್ರೀಕರಣವನ್ನು ಮಾರ್ಚ್ ಮೊದಲ ವಾರದಿಂದ ನಿಗದಿ ಮಾಡಿದ್ದೇವೆ ಮತ್ತು ಅವರು ನಮ್ಮ ಸೆಟ್ ಸೇರಲಿದ್ದಾರೆ" ಎಂದು ತಿಳಿಸುತ್ತಾರೆ ಸೂರಿ.