೪೦ ವರ್ಷಗಳ ನಂತರ ದ್ವಾರಕೀಶ್ ಚಿತ್ರದ ಜೊತೆಗೆ ರಾಜಕುಮಾರ್ ಕುಟುಂಬ ಸಹಯೋಗ

ತರುಣ್ ಸುಧೀರ್ ಅವರ ಚೊಚ್ಚಲ ನಿರ್ದೇಶನದ 'ಚೌಕ' ೨೫ ತಂತ್ರಜ್ಞರನ್ನು ಒಟ್ಟಿಗೆ ತರುವ ಮೂಲಕ ನಿರೀಕ್ಷೆಗಳನ್ನು ಹುಟ್ಟಿ ಹಾಕಿದೆ. ಈ ಸಿನೆಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅತಿಥಿ ಪಾತ್ರದಲ್ಲಿ
ಯೋಗಿ ದ್ವಾರಕೀಶ್, ಪುನೀತ್ ಮತ್ತು ತರುಣ್
ಯೋಗಿ ದ್ವಾರಕೀಶ್, ಪುನೀತ್ ಮತ್ತು ತರುಣ್
Updated on: 
ಬೆಂಗಳೂರು: ತರುಣ್ ಸುಧೀರ್ ಅವರ ಚೊಚ್ಚಲ ನಿರ್ದೇಶನದ 'ಚೌಕ' ೨೫ ತಂತ್ರಜ್ಞರನ್ನು ಒಟ್ಟಿಗೆ ತರುವ ಮೂಲಕ ನಿರೀಕ್ಷೆಗಳನ್ನು ಹುಟ್ಟಿ ಹಾಕಿದೆ. ಈ ಸಿನೆಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅತಿಥಿ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ. ತಮ್ಮ ನಿರ್ದೇಶನದ ಕಿರೀಟದಲ್ಲಿ ಮತ್ತೊಂದು ಗರಿ ಸಿಕ್ಕಿಸಿಕೊಂಡಿರುವ ತರುಣ್, ಪುನೀತ್ ರಾಜಕುಮಾರ್ ಅವರಿಂದ ಒಂದು ಹಾಡನ್ನು ಹಾಡಿಸಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಿರುವ ಒಂದು ಹಾಡಿಗೆ ಪುನೀತ್ ಕಂಠದಾನ ಮಾಡಿದ್ದಾರೆ. 
ಮಂಗಳವಾರ ನಟ ಹಾಡನ್ನು ರೆಕಾರ್ಡ್ ಮಾಡಿದ್ದಾರೆ. ರಾಜಕುಮಾರ್ ಕುಟುಂಬ ೪೦ ವರ್ಷಗಳ ನಂತರ ದ್ವಾರಕೀಶ್ ಚಿತ್ರದ ನಿರ್ಮಾಣ ಸಂಸ್ಥೆಯೊಂದಿಗೆ ಮತ್ತೆ ಸಖ್ಯ ಬೆಳೆಸಿದೆ ಎಂದು ತಿಳಿಸುತ್ತಾರೆ ನಿರ್ದೇಶಕ ತರುಣ್. ದ್ವಾರಕೀಶ್ ಚಿತ್ರ ನಿರ್ಮಿಸುತ್ತಿರುವ ೫೦ ನೆಯ ಚಿತ್ರ 'ಚೌಕ'.
"ದ್ವಾರಕೀಶ್ ನಿರ್ಮಾಣದ ಮೊದಲ ಸಿನೆಮಾ 'ಮೇಯರ್ ಮುತ್ತಣ್ಣ' ಮತ್ತು ಅದರಲ್ಲಿ ರಾಜಕುಮಾರ್ ನಟಿಸಿದ್ದರು, 'ಭಾಗ್ಯವಂತರು' ೧೯೯೭ ರಲ್ಲಿ ಬಂದಿತ್ತು. ಇದಾದ ನಂತರ ಪುನೀತ್ ದ್ವಾರಕೀಶ್ ನಿರ್ಮಾಣದ ಸಿನೆಮಾದಲ್ಲಿ ಹಾಡುವುದರೊಂದಿಗೆ ಮತ್ತೆ ಒಂದಾಗಿದ್ದಾರೆ" ಎಂದು ವಿವರಿಸುತ್ತಾರೆ ತರುಣ್. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com