'ತಿಥಿ' ನಟರ ಮತ್ತೊಂದು ಸಿನೆಮಾ 'ಯೇನ್ ನಿನ್ ಪ್ರಾಬ್ಲಮ್ಮು'; ಈ ವಾರ ಬಿಡುಗಡೆ

ಬಹುಷಃ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ೯೮ ವರ್ಷದ ಸಿಂಗ್ರಿ ಗೌಡ ಮತ್ತು ೮೦ ವರ್ಷದ ಚನ್ನೇ ಗೌಡ ಬಹು ಬೇಡಿಕೆಯ ನಟರು. ರಾಮ್ ರೆಡ್ಡಿ ನಿರ್ದೇಶನದ 'ತಿಥಿ' ಸಿನೆಮಾದಲ್ಲಿ ಕ್ರಮವಾಗಿ ಸೆಂಚ್ಯುರಿ ಗೌಡ ಮತ್ತು
ಚನ್ನೇಗೌಡ/ಗಡ್ದಪ್ಪ
ಚನ್ನೇಗೌಡ/ಗಡ್ದಪ್ಪ
Updated on
ಬೆಂಗಳೂರು: ಬಹುಷಃ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ೯೮ ವರ್ಷದ ಸಿಂಗ್ರಿ ಗೌಡ ಮತ್ತು ೮೦ ವರ್ಷದ ಚನ್ನೇಗೌಡ ಬಹು ಬೇಡಿಕೆಯ ನಟರು. ರಾಮ್ ರೆಡ್ಡಿ ನಿರ್ದೇಶನದ 'ತಿಥಿ' ಸಿನೆಮಾದಲ್ಲಿ ಕ್ರಮವಾಗಿ ಸೆಂಚ್ಯುರಿ ಗೌಡ ಮತ್ತು ಗಡ್ದಪ್ಪ ಪಾತ್ರ ನಿರ್ವಹಿಸಿದ್ದ ಈ ನಟರು ಈ ಪಾತ್ರಗಳ ಹೆಸರುಗಳಿಂದಲೇ ಕನ್ನಡ ನಾಡಿನಲ್ಲಿ ಚಿರಪರಿಚಿತ. ಈ ಜೋಡಿಯ ಜೊತೆ ಮತ್ತೊಬ್ಬ ಯುವ ನಟ ಅಭಿಷೇಕ್ ಕೂಡ ಸೇರಿದ್ದಾರೆ. 
ಕನ್ನಡ ಸಿನೆಮಾಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ ಎಂಬ ಕೊರಗಿನ ಮಧ್ಯೆಯೂ ಈ ತ್ರಿವಳಿ ನಟರು ನಟಿಸರುವ 'ಯೇನ್ ನಿನ್ ಪ್ರಾಬ್ಲಮ್ಮು' ಚಿತ್ರ, ಈ ವಾರ ಬಿಡುಗಡೆಯಾಗುತ್ತಿದ್ದು, ಬೆಂಗಳೂರು ಮತ್ತು ಮೈಸೂರಿನಲ್ಲಿಯೇ ೧೫೦ ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. 
ಈ ಸಿನೆಮಾ ವಿತರಣೆ ಮಾಡುತ್ತಿರುವ ಜಾಕ್ ಮಂಜು, ಸಿನಿಮಾಮಂದಿರಗಳ ಮಾಲೀಕರು ಈ ಚಿತ್ರಪ್ರದರ್ಶನಕ್ಕೆ ಅಪಾರ ಬೇಡಿಕೆ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ. "ಬಹುಷಃ ಪ್ರೇಕ್ಷಕರಿಗೆ ಗಡ್ದಪ್ಪ ಮತ್ತು ಸೆಂಚ್ಯುರಿ ಗೌಡ ಸಂತೃಪ್ತಿಯಾಗಿ ಸಿಕ್ಕಿಲ್ಲ. ಈ ಇಬ್ಬರ ಸ್ವಾಭಾವಿಕ ನಟನೆಯನ್ನು ಜನ ಅತೀವವಾಗಿ ಇಷ್ಟಪಡುತ್ತಿದ್ದಾರೆ" ಎನ್ನುತ್ತಾರೆ. 
'ಯೇನ್ ನಿನ್ ಪ್ರಾಬ್ಲಮ್ಮು' ಸಿನೆಮಾವನ್ನು ಗಾಳಿ ಲಕ್ಕಿ ನಿರ್ದೇಶಿಸಿದ್ದು, ಸೆಂಥಿಲ್ ಸಿನೆಮ್ಯಾಟೋಗ್ರಾಫರ್. ನವೀನ್ ಸಜ್ಜು ಈ ಸಿನೆಮಾದ ಮೂಲಕ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com