ಮುಂದಿನ ತಿಂಗಳು ಕೊಡಗಿನ ಬೆಡಗಿ 'ನಿಧಿ ಕಲ್ಯಾಣ'

ಪಂಚರಂಗಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಅಣ್ಣಾ ಬಾಂಡ್ ಸಿನಿಮಾಗಳ ಮೂಲಕ ಅಭಿಮಾನಿಗಳ ದಿಲ್ ಕದ್ದಿದ್ದ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ
ನಿಧಿ ಹಾಗೂ ಲವೇಶ್
ನಿಧಿ ಹಾಗೂ ಲವೇಶ್
ಪಂಚರಂಗಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಅಣ್ಣಾ ಬಾಂಡ್ ಸಿನಿಮಾಗಳ ಮೂಲಕ ಅಭಿಮಾನಿಗಳ ದಿಲ್ ಕದ್ದಿದ್ದ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಮುಂದಿನ ತಿಂಗಳು ಹಸೆಮಣೆ ಏರಲು ಸಿದ್ಧರಾಗಿದ್ದು, ತಮ್ಮ ಗೆಳಯ, ಉದ್ಯಮಿ ಲವೇಶ್ ಖೈರಜನಿ ಅವರ ಕೈಹಿಡಿಯುತ್ತಿದ್ದಾರೆ.
ಮುಂಬೈ ಮೂಲದ ಉದ್ಯಮಿ ಲವೇಶ್ ಅವರೊಂದಿಗೆ ನಿಧಿ ಸುಬ್ಬಯ್ಯ ಫೆಬ್ರವರಿ ತಿಂಗಳಲ್ಲಿ ಅವರ ಹುಟ್ಟೂರಾದ ಕೊಡಗಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. 
ಜನವರಿ 1ರಂದು ಲವೇಶ್ ಅವರು ತಮಗೆ ಉಂಗುರುವನ್ನು ತೊಡಿಸಿ ರೋಮ್ಯಾಂಟಿಕ್ ಆಗಿ ಮದುವೆ ಪ್ರಸ್ತಾವನೆ ಮಾಡಿದ್ದನ್ನು ನಿಧಿ ನೆನಪಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com