ತಮ್ಮ ಮುಂದಿನ ಚಿತ್ರ ಕನಕದಲ್ಲಿ ನಟ ದುನಿಯಾ ವಿಜಯ್ ಅವರ ಫೋಟೋ ಶೂಟ್ ನಡೆಯುತ್ತಿದ್ದು, ನಿರ್ದೇಶಕ ಆರ್.ಚಂದ್ರು ಇದೀಗ ನಾಯಕಿಯರ ಆಯ್ಕೆ ಕೆಲಸದಲ್ಲಿ ತೊಡಗಿದ್ದಾರೆ. ಚಿತ್ರದ ಶೂಟಿಂಗ್ ಫೆಬ್ರವರಿ 9ರಿಂದ ಆರಂಭವಾಗಲಿದೆ.
ಯೂ ಟರ್ನ್ ಚಿತ್ರದ ನಾಯಕಿ ಶ್ರದ್ಧಾ ಶ್ರೀನಾಥ್ ಅವರು ನಾಯಕಿಯಾಗುವುದು ಬಹುತೇಕ ಖಚಿತವಾಗಿದೆ. ಇನ್ನೊಂದು ಪಾತ್ರಕ್ಕೆ ನಿತ್ಯಾ ಮೆನನ್ ಅಥವಾ ಶ್ರುತಿ ಹರಿಹರನ್ ಅವರನ್ನು ಆಯ್ಕೆ ಮಾಡಲು ಆಸಕ್ತಿ ಹೊಂದಿದ್ದಾರೆ.
ಶ್ರದ್ಧಾ ಅವರ ಜೊತೆಗೆ ಈಗಾಗಲೇ ಪಾತ್ರ ಮತ್ತು ಸಂಭಾವನೆ ಕುರಿತು ಮಾತುಕತೆ ನಡೆಸಲಾಗಿದ್ದು ಅವರು ಕೂಡ ಒಪ್ಪಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ ಶ್ರದ್ಧಾ ಮುರಳಿ ಮಾಸ್ಟರ್ ಅವರ ಪೆಲ್ಲಿ ಚೂಪುಲು ರಿಮೇಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಿರ್ದೇಶಕ ಆರ್.ಚಂದ್ರ 10 ವರ್ಷಗಳ ಹಿಂದೆ ತಮ್ಮ ಮೊದಲ ಚಿತ್ರ ತಾಜ್ ಮಹಲ್ ನ್ನು ಇದೇ ಸಮಯದಲ್ಲಿ ಆರಂಭಿಸಿದ್ದು ಅದು ಜುಲೈ 25ರಂದು ತೆರೆ ಕಂಡಿತ್ತು. ಈ ಬಾರಿ ಕನಕ ಚಿತ್ರದ ಶೂಟಿಂಗ್ ನ್ನು ಕೂಡ ಅದೇ ದಿನದಂದು ಆರಂಭಿಸಿ ಜುಲೈ 25ರಂದು ಬಿಡುಗಡೆ ಮಾಡುವ ಯೋಚನೆಯಲ್ಲಿದ್ದಾರೆ.