ಸಿನಿಮಾ ಮಂದಿರಗಳಲ್ಲಿ ಜಿಎಸ್‌ಟಿ ಜೊತೆಗೆ ರು. 100ರ ಒಳಗಿನ ಟಿಕೆಟ್‌ಗಳಿಗೆ ಶೇ. 18ರಷ್ಟು ತೆರಿಗೆ ವಿಧಿಸಲಾಗುತ್ತದೆ. ರು. 100ಕ್ಕಿಂತ ಹೆಚ್ಚಿರುವ ಮಲ್ಟಿಪ್ಲೆಕ್ಸ್ ಟಿಕೆಟ್‌ಗಳಿಗೆ ಶೇ. 28ರಷ್ಟು ತೆರಿಗೆ ವಿಧಿಸಲಾಗುತ್ತದೆ. ಆದರೆ, ಜಿಎಸ್‌ಟಿ ಜತೆಗೆ ಸ್ಥಳೀಯಾಡಳಿತ ತೆರಿಗೆ ಹೇರಿದರೆ, ಟಿಕೆಟ್ ಮೌಲ್ಯದ ಅರ್ಧದಷ್ಟು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.