ಉಮಾಪತಿ ನಿರ್ಮಾಣದ ಮುಂದಿನ ಸಿನಿಮಾಗೆ ಪುನೀತ್ ಹೀರೋ

ರಾಜಕುಮಾರ ಸಿನಿಮಾ ಯಶಸ್ಸಿನಲ್ಲಿರುವ ನಟ ಪುನೀತ್ ರಾಜ್ ಕುಮಾರ್ ಉಮಾಪತಿ ಅವರ ನಿರ್ಮಾಣದ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ...
ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್
ಬೆಂಗಳೂರು: ರಾಜಕುಮಾರ ಸಿನಿಮಾ ಯಶಸ್ಸಿನಲ್ಲಿರುವ ನಟ ಪುನೀತ್ ರಾಜ್ ಕುಮಾರ್ ಉಮಾಪತಿ ಅವರ ನಿರ್ಮಾಣದ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ.
ಉಮಾಪತಿ-ಪುನೀತ್ ಜೋಡಿಯ ಈ ಸಿನಿಮಾ 2018 ಕ್ಕೆ ಸೆಟ್ಟೇರಲಿದೆ. ಈಗಾಗಲೇ ಉಮಾಪತಿ ಪುನೀತ್ ಕಾಲ್ ಶೀಟ್ ಪಡೆದುಕೊಂಡಿದ್ದಾರೆ, ಸದ್ಯ ಉತ್ತಮ ನಿರ್ದೇಶಕರಾಗಿ ಹುಡುಕಾಟ ನಡೆಸಿದ್ದಾರೆ. ಪುನೀತ್ ಗೆ ಹೊಂದುವಂತೆ ಚಿತ್ರಕಥೆ ಬರೆಯುವ ನಿರ್ದೇಶಕರಿಗಾಗಿ ಎದುರು ನೋಡುತ್ತಿದ್ದಾರೆ.
ಸದ್ಯ ಪುನೀತ್ ಹರ್ಷ ನಿರ್ದೇಶನಕ ಅಂಜನೀಪುತ್ರ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ., ಇದಾದ ನಂತರ ಮುಂದಿನ ದೊಡ್ಡ ಪ್ರಾಜೆಕ್ಟ್ ಫೈನಲೈಸ್ ಮಾಡಲಿದ್ದಾರೆ.
ಒಂದು ಸಿನಿಮಾ ನಿರ್ಮಾಣ ಮಾಡಿರುವ ನಿರ್ಮಾಪಕರ ಜೊತೆ  ಸ್ಯಾಂಡಲ್ ವುಡ್ ನ ಬಿಗ್ ಸ್ಟಾರ್ ಗಳು ಕೆಲಸ ಮಾಡುವುದು ಉತ್ತಮ ಅವಕಾಶ ಸಿಕ್ಕಿದಂತೆ. ಇದು ಜವಾಬ್ದಾರಿ ಹಾಗೂ ಕರ್ತವ್ಯ ಹೆಚ್ಚುವಂತೆ ಮಾಡುತ್ತದೆ ಎಂದು ಉಮಾಪತಿ ತಿಳಿಸಿದ್ದಾರೆ.
ಜೊತೆಗೆ ಯುವ ನಿರ್ದೇಶಕರಿಗೆ ಅವಕಾಶ ನೀಡುವುದಾಗಿ ಉಮಾಪತಿ ಭರವಸೆ ನೀಡಿದ್ದಾರೆ.ರಾಮಾ ರಾಮಾ ರೇ ನಿರ್ದೇಶಕ ಡಾ. ಸತ್ಯ ಪ್ರಕಾಶ್ ಉಮಾಪತಿ  ಪ್ರೊಡಕ್ಷನ್ ನ ಸಿನಿಮಾಗಾಗಿ ಸ್ಕ್ರಿಪ್ಟ್ ತಯಾರಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com