ಸಿಲ್ಲಿ ಕಾರಣಕ್ಕೆ ಪ್ರಭಾಸ್‌ರ 'ಸಾಹೋ' ಚಿತ್ರದಿಂದ ಅನುಷ್ಕಾ ಶೆಟ್ಟಿ ಹೊರಕ್ಕೆ!

ಬಾಹುಬಲಿ ಚಿತ್ರದ ನಂತರ ನಟ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಇಬ್ಬರು ಅತ್ಯುತ್ತಮ ಜೋಡಿ ಎಂಬ ಖ್ಯಾತಿ ಪಡೆದಿತ್ತು. ಇದೇ ಜೋಡಿ ಸಾಹೋ ಚಿತ್ರದ ಮೂಲಕ ಮತ್ತೆ ತೆರೆಯ...
ಪ್ರಭಾಸ್-ಅನುಷ್ಕಾ ಶೆಟ್ಟಿ
ಪ್ರಭಾಸ್-ಅನುಷ್ಕಾ ಶೆಟ್ಟಿ
ಬಾಹುಬಲಿ ಚಿತ್ರದ ನಂತರ ನಟ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಇಬ್ಬರು ಅತ್ಯುತ್ತಮ ಜೋಡಿ ಎಂಬ ಖ್ಯಾತಿ ಪಡೆದಿತ್ತು. ಇದೇ ಜೋಡಿ ಸಾಹೋ ಚಿತ್ರದ ಮೂಲಕ ಮತ್ತೆ ತೆರೆಯ ಮೇಲೆ ವಿಜೃಂಬಿಸಲಿದೆ ಎಂದು ಹೇಳಲಾಗಿತ್ತು. ಆದರೆ ಸಾಹೋ ಚಿತ್ರದಿಂದ ಅನುಷ್ಕಾ ಶೆಟ್ಟಿ ಅವರನ್ನು ಕೈ ಬಿಡಲಾಗಿದೆ ಎಂಬ ಸುದ್ದಿ ಟಾಲಿವುಡ್ ನಲ್ಲಿ ಕೇಳಿಬರುತ್ತಿದೆ. 
ಬಾಹುಬಲಿ ಚಿತ್ರಕ್ಕಾಗಿ ಸ್ವಲ್ಪ ತೂಕ ಹೆಚ್ಚಿಸಿಕೊಂಡಿದ್ದ ಅನುಷ್ಕಾ ಶೆಟ್ಟಿ ಸಾಹೋ ಚಿತ್ರದ ಪಾತ್ರಕ್ಕಾಗಿ ಸ್ಲಿಮ್ ಆಗಬೇಕಿತ್ತು. ಸಾಹೋ ಚಿತ್ರದಲ್ಲಿ ಅನುಷ್ಕಾ ಬೋಲ್ಡ್, ಹಾಟ್ ಅಂಡ್ ಸೆಕ್ಸಿಯಾಗಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಅನುಷ್ಕಾ ಅಗತ್ಯಕ್ಕಿಂತ ಹೆಚ್ಚು ತೂಕ ಇದ್ದಾರೆ. ಕಠಿಣವಾಗಿ ವರ್ಕೌಟ್ ಮಾಡುತ್ತಿದ್ದರು 6 ರಿಂದ 7 ಕೆಜಿ ತೂಕ ಹೆಚ್ಚಿರುವುದರಿಂದ ಸಾಹೋ ಚಿತ್ರದಿಂದ ಅವಕಾಶ ಕಳೆದುಕೊಳ್ಳುವ ಭೀತಿಯಲ್ಲಿ ಅನುಷ್ಕಾ ಇದ್ದಾರೆ. 
ಇದೇ ಕಾರಣಕ್ಕೆ ಅನುಷ್ಕಾ ಶೆಟ್ಟಿ ಮಾಧ್ಯಮ ಹಾಗೂ ಸೀಮಾ 2017 ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು. ಸದ್ಯ ಸಾಹೋ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಚಿತ್ರೀಕರಣ ಭರದಿಂದ ಸಾಗಿದೆ. ಚಿತ್ರಕ್ಕೆ ಕತ್ರಿನಾ ಕೈಫ್ ನಾಯಕಿ ಆಗುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com