'ಲೇಡಿಸ್ ಟೈಲರ್' ಆಗಿ ನವರಸ ನಾಯಕ ಜಗ್ಗೇಶ್

ನಿರ್ದೇಶಕ ವಿಜಯ್ ಪ್ರಸಾದ್ ಅವರ 34:34 ಲೇಡಿಸ್ ಟೈಲರ್ ಸಿನಿಮಾ ಮತ್ತೊಮ್ಮೆ ಸುದ್ದಿಯಲ್ಲಿದೆ. ಲೇಡಿಸ್ ಟೈಲರ್ ಗೆ ಇಬ್ಬರು ನಾಯಕರ ನಂತರ
ಜಗ್ಗೇಶ್
ಜಗ್ಗೇಶ್
Updated on
ಬೆಂಗಳೂರು: ನಿರ್ದೇಶಕ ವಿಜಯ್ ಪ್ರಸಾದ್ ಅವರ 34:34 ಲೇಡಿಸ್ ಟೈಲರ್ ಸಿನಿಮಾ ಮತ್ತೊಮ್ಮೆ ಸುದ್ದಿಯಲ್ಲಿದೆ. 
ಲೇಡಿಸ್ ಟೈಲರ್ ಗೆ ಇಬ್ಬರು ನಾಯಕರ ನಂತರ ಅಂತಿಮವಾಗಿ ಜಗ್ಗೇಶ್ ಆಯ್ಕೆಯಾಗಿದ್ದಾರೆ.  ಯಶಸ್ವಿ ಸಿನಿಮಾ ನೀರ್ ದೋಸೆ ನಂತರ ಜಗ್ಗೇಶ್ ಮತ್ತು ವಿಜಯ ಪ್ರಸಾದ್ ಮತ್ತೆ ಲೇಡಿಸ್ ಟೈಲರ್ ಮೂಲಕ ಒಂದಾಗುತ್ತಿದ್ದಾರೆ.
ಲೇಡಿಸ್ ಟೈಲರ್ ಸಿನಿಮಾ ಪ್ರಕಟಿಸಿದ ನಂತರ, ಅದಕ್ಕೆ ರವಿಶಂಕರ್ ಗೌಡ ನಾಯಕ ಎಂದು ಘೋಷಿಸಲಾಗಿತ್ತು, ಅದರ ನಂತರ ನೀನಾಸಂ ಸತೀಶ್ ಆಯ್ಕೆ ಮಾಡಲಾಗಿತ್ತು. ಈಗ ಈ ಇಬ್ಬರು ಬದಲಾಗಿ ಜಗ್ಗೇಶ್ ಲೇಡಿಸ್ ಟೈಲರ್ ಆಗಲಿದ್ದಾರೆ.
ಲೇಡಿಸ್ ಟೈಲರ್ ಸಿನಿಮಾ ಘೋಷಿಸಿದ ನಂತರ ಜಗ್ಗೇಶ್ ಅವರೇ ಅದಕ್ಕೆ ಸೂಕ್ತ ನಾಯಕ ಎಂದು ಇಡೀ ಸಿನಿಮಾ ರಂಗ ಅಭಿಪ್ರಾಯ ಪಟ್ಟಿತ್ತು. ಕಥೆಯ ನಾಯಕನ ಪಾತ್ರಕ್ಕೆ ಜಗ್ಗೇಶ್ ರಿಂದ ಮಾತ್ರ ನ್ಯಾಯ ದೊರಕಿಸಲು ಯೋಗ್ಯವಾದ ಹೀರೋ ಎಂದು ಸಲಹೆ ನೀಡಿದ್ದರು. ಹೀಗಾಗಿ ಶೀಘ್ರವೇ ಜಗ್ಗೇಶ್ ಲೇಡಿಸ್ ಟೈಲರ್ ಸಿನಿಮಾಗೆ ಸಹಿ ಮಾಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com