11 ವರ್ಷಗಳ ನಂತರ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾದಲ್ಲಿ ಪುನೀತ್

ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾದಲ್ಲಿ ಅಭಿನಯಿಸಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಸಕ್ತಿ ...
ಪುನೀತ್ ರಾಜ್ ಕುಮಾರ್ , ವೆಟ್ರಿಮಾರನ್, ರಾಕ್ ಲೈನ್ ವೆಂಕಟೇಶ್ ಮತ್ತು ಎನ್ ಎಸ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್ , ವೆಟ್ರಿಮಾರನ್, ರಾಕ್ ಲೈನ್ ವೆಂಕಟೇಶ್ ಮತ್ತು ಎನ್ ಎಸ್ ರಾಜ್ ಕುಮಾರ್
Updated on
ಬೆಂಗಳೂರು: ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾದಲ್ಲಿ ಅಭಿನಯಿಸಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಸಕ್ತಿ ವಹಿಸಿದ್ದಾರೆ.
ರಾಕ್ ಲೈನ್ ನಿರ್ಮಾಣದ ಸಿನಿಮಾವನ್ನು ವೆಟ್ರಿಮಾರನ್ ನಿರ್ದೇಶಿಸಲಿದ್ದಾರೆ. ಈ ಸಂಬಂಧ ಮೂವರು ಗುರುವಾರ ಸರಣಿ ಸಭೆ ನಡೆಸಿ ಚರ್ಚಿಸಿ, ಸ್ಕ್ರಿಪ್ಟ್ ಫೈನಲ್ ಮಾಡಿದ್ದಾರೆ.
ಯೋಜನೆಯಂತೆ ಎಲ್ಲವೂ ನಡೆದರೇ, ಪುನೀತ್ ಅಂಜನೀಪುತ್ರ ಶೂಟಿಂಗ್ ಮುಗಿದ ನಂತರ ಅಂದರೇ ಅಕ್ಟೋಬರ್ ನಲ್ಲಿ ವೆಟ್ರಿಮಾರನ್ ಸಿನಿಮಾ ಆರಂಭಿಸಲಿದ್ದಾರೆ.
ಕಥೆ ಪುನೀತ್ ಗೆ ಮೆಚ್ಚುಗೆಯಾಗಿದ್ದು, ನಿರ್ದೇಶಕರು ಸಂಭಾಷಣೆ ಮತ್ತು ಚಿತ್ರಕತೆ ಬರೆಯುತ್ತಿದ್ದಾರೆ ಎಂದು ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.
ಕನ್ನಡದಲ್ಲಿ  ವೆಟ್ರಿಮಾರನ್ ಮೊದಲ ಸಿನಿಮಾವಾಗಿದ್ದು, 11 ವರ್ಷಗಳ ನಂತರ ಪುನೀತ್ ಮತ್ತರ ರಾಕ್ ಲೈನ್ ವೆಂಕಟೇಶ್ ಮತ್ತೆ ಒಂದಾಗಿದ್ದಾರೆ. 2006 ರಲ್ಲಿ ರಾಕ್ ಲೈನ್ ನಿರ್ಮಾಣದಲ್ಲಿ ಮೌರ್ಯ ಮತ್ತು ಅಜಯ್ ಸಿನಿಮಾ ರಿಲೀಸ್ ಆಗಿದ್ದವು. 
ಉತ್ತಮ ಕಥೆಗಾಗಿ ನಾವಿಬ್ಬರು ಕಾಯುತ್ತಿದ್ದೆವು, ಅದು ಈಗ ಕೂಡಿಬಂದಿದೆ ಎಂದು ಅವರು ತಿಳಿಸಿದ್ದಾರೆ. ಕನ್ನಡ ಚಿತ್ರರಂಗದ ಇಬ್ಬರು ದೈತ್ಯರು ಒಂದಾಗಿರುವುದರಿಂದ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಬ್ಲ್ಯಾಕ್ ಬಸ್ಟರ್ ಸಿನಿಮಾವನ್ನು ನಿರೀಕ್ಷಿಸಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com