ಲಂಡನ್ ನಲ್ಲಿ ವಿಲನ್ ಸಿನಿಮಾ ಶೂಟಿಂಗ್: ಚಿತ್ರತಂಡ ಸೇರಿದ ಶಿವಣ್ಣ

ನಿರ್ದೇಶಕ ಪ್ರೇಮ್ ಅವರ ವಿಲ್ಲನ್ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ಈಗಾಗಲೇ ಮಲೇಶಿಯಾದಲ್ಲಿ ಕೆಲ ಭಾಗದ ಚಿತ್ರೀಕರಣ ...
ಶಿವರಾಜ್ ಕುಮಾರ್ ಮತ್ತು ರಕ್ಷಿತಾ
ಶಿವರಾಜ್ ಕುಮಾರ್ ಮತ್ತು ರಕ್ಷಿತಾ
ಬೆಂಗಳೂರು: ನಿರ್ದೇಶಕ ಪ್ರೇಮ್ ಅವರ ವಿಲ್ಲನ್ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ಈಗಾಗಲೇ ಮಲೇಶಿಯಾದಲ್ಲಿ ಕೆಲ ಭಾಗದ ಚಿತ್ರೀಕರಣ ಮುಗಿದಿದೆ. ಚಿತ್ರತಂಡ ಮಲೇಶಿಯಾದಂದ ಲಂಡನ್ ಗೆ ತೆರಳಿದೆ.
ಲಂಡನ್ ನಲ್ಲಿ , ಶಿವರಾಜ್ ಕುಮಾರ್, ಸುದೀಪ್, ಆ್ಯಮಿ ಜಾಕ್ಸನ್ ಶೂಟಿಂಗ್ ಸೋಮವಾರದಿಂದ ಆರಂಭವಾಗಲಿದೆ. ವಿಲ್ಲನ್ ಸಿನಿಮಾ ಕಲಾವಿದರ ಹೊಸ ಲುಕ್ ಬಯಲಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ವೈರಲ್ ಆಗಿದೆ.
ಚಿತ್ರತಂಡದ 26 ಸದಸ್ಯರು ಶೂಟಿಂಗ್ ಗಾಗಿ 15 ದಿನಗಳ ಕಾಲ ಲಂಡನ್ ನಲ್ಲಿರಲಿದೆ. ಪ್ರಮುಖ ಸ್ಥಳಗಳಲ್ಲಿ ಶೂಟಿಂಗ್ ನಡೆಸಲು ಪ್ರೇಮ್ ಈಗಾಗಲೇ ಲೊಕೇಶನ್ ಗುರುತಿಸಿದ್ದಾರೆ. 
ವಾಟರ್ ಲೂ ಸ್ಟೇಷನ್, ವೆಸ್ಟರ್ ಮಿನಿಸ್ಟರ್ ಬ್ರಿಡ್ಜ್, ಥೇಮ್ ನದಿಪ್ರದೇಶಗಳಲ್ಲಿ ಶೂಟಿಂಗ್ ಸ್ಪಾಟ್ ಗುರುಸಿಲಾಗಿದೆ, ನಿರ್ದೇಶಕ ಪ್ರೇಮ್  ಪತ್ನಿ ರಕ್ಷಿತಾ ಕೂಡ ಲಂಡನ್ ತಲುಪಿದ್ದಾರೆ, ಶಿವಣ್ಣ ಜೊತೆ ರಕ್ಷಿತಾ ಸೆಲ್ಫಿಗೆ ಪೊಸ್ ನೀಡಿದ್ದಾರೆ.  ಸಿ.ಆರ್ ಮನೋಹರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಅರ್ಜುನ್ಯ ಜನ್ಯ  ಸಂಗೀತ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com