'ಬಿಲ್ಡಪ್ ಅಂದ್ರೆ ದರ್ಶನ್' ಹೇಳಿಕೆಗೆ ಕ್ಷಮೆಯಾಚಿಸಿದ ಬಿಗ್‌ಬಾಸ್‌ ಸಂಜನಾ

ಗಾಂಧೀನಗರದಲ್ಲಿ ಸ್ಟಾರ್ ನಟರ ವಿರುದ್ಧ ಕಮೆಂಟ್ ಮಾಡುವ ಮೂಲಕ ಹಲವು ಯುವ ನಟಿಯರು ಸುದ್ದಿಯಾಗುತ್ತಿದ್ದಾರೆ. ಬಿಗ್ ಬಾಸ್ ಸಂಜನಾ ಬಿಲ್ಡಪ್ ಅಂದ್ರೆ ದರ್ಶನ್ ಎಂದು...
ದರ್ಶನ್-ಸಂಜನಾ
ದರ್ಶನ್-ಸಂಜನಾ
ಗಾಂಧೀನಗರದಲ್ಲಿ ಸ್ಟಾರ್ ನಟರ ವಿರುದ್ಧ ಕಮೆಂಟ್ ಮಾಡುವ ಮೂಲಕ ಹಲವು ಯುವ ನಟಿಯರು ಸುದ್ದಿಯಾಗುತ್ತಿದ್ದಾರೆ. ಬಿಲ್ಡಪ್ ಅಂದ್ರೆ ದರ್ಶನ್ ಎಂದು ಹೇಳಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದ ಬಿಗ್ ಬಾಸ್ ಸಂಜನಾ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಟಾಕ್ ಶೋವೊಂದರಲ್ಲಿ ರ್ಯಾಪಿಡ್ ರೌಂಡ್ ನಲ್ಲಿ ಶೋ ಆಫ್ ಎಂಬ ಪ್ರಶ್ನೆಗೆ ಯಶ್ ಎಂದು ಉತ್ತರಿಸಿ ನಟಿ ರಶ್ಮಿಕಾ ಮಂದಣ್ಣ ವಿವಾದಕ್ಕೆ ಸಿಲುಕಿದ್ದರು. ಇದೀಗ ಬಿಗ್ ಬಾಸ್ ಸಂಜನಾ ಬಿಲ್ಡಪ್ ಅಂದ್ರೆ ದರ್ಶನ್ ಎಂದು ಹೇಳಿ ವಿವಾದಕ್ಕೆ ಗುರಿಯಾಗಿದ್ದರು. ಸಂಜನಾ ಹೇಳಿಕೆಗೆ ದರ್ಶನ್ ಅಭಿಮಾನಿಗಳು ಗರಂ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಂಜನಾ ವಿರುದ್ಧ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. 
ಮೊದ ಮೊದಲು ಸಂಜನಾ ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ. ಅದು ನನ್ನ ವೈಯಕ್ತಿಕ ಅಭಿಪ್ರಾಯ. ಅವರವರ ಅಭಿಪ್ರಾಯ ಅವರವರಿಗೆ ಎಂದು ಆರಂಭದಲ್ಲಿ ಖಡಕ್ ಆಗಿ ಹೇಳಿದ್ದ ಸಂಜನಾ, ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಗರಂ ಆಗಿರುವುದನ್ನು ನೋಡಿ ಕೊನೆಗೂ ಕ್ಷಮೆ ಕೇಳಿದ್ದಾರೆ. 
ದರ್ಶನ್ ಸರ್ ಅಥವಾ ಅವರ ಅಭಿಮಾನಿಗಳಿಗೆ ನೋವು ಮಾಡುವ ಯಾವುದೇ ಉದ್ದೇಶ ನನಗಿಲ್ಲ. ಅವರಿಗೆ ಬೇಸರವಾಗಿದ್ದಕ್ಕೆ ಕ್ಷಮೆ ಕೇಳುತ್ತೇನೆ. ನಾನು ದರ್ಶನ್ ಅವರ ಸಿನಿಮಾದಲ್ಲಿ ತುಂಬಾ ಬಿಲ್ಡಪ್ ಇರುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದೆ. ಅದು ಇಷ್ಟು ದೊಡ್ಡ ವಿವಾದವಾಗುತ್ತದೆ ಎಂದು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com