ಚಿತ್ರಕ್ಕೆ ಸಹಿ ಹಾಕುವ ಮುನ್ನವೇ ಅದರ ಬಗ್ಗೆ ಮಾತುಕತೆ ಬೇಡ: ಐಂದ್ರಿತಾ ರೇ

ಸ್ಯಾಂಡಲ್ ವುಡ್ ಗ್ಲಾಮರ್ ಬೊಂಬೆ ಐಂದ್ರಿತಾ ರೈ ಸಿನಿಮಾಗಳ ಆಯ್ಕೆಯಲ್ಲಿ ತುಂಬಾ ಚ್ಯೂಸಿ, ತಮ್ಮ ಸಿನಿಮಾಗಳ ಪ್ರಚಾರ ...
ಐಂದ್ರಿತಾ ರೇ
ಐಂದ್ರಿತಾ ರೇ
ಬೆಂಗಳೂರು: ಸ್ಯಾಂಡಲ್ ವುಡ್ ಗ್ಲಾಮರ್ ಬೊಂಬೆ ಐಂದ್ರಿತಾ ರೇ ಸಿನಿಮಾಗಳ ಆಯ್ಕೆಯಲ್ಲಿ ತುಂಬಾ ಚ್ಯೂಸಿ, ತಮ್ಮ ಸಿನಿಮಾಗಳ ಪ್ರಚಾರ ಹೊರತು ಪಡಿಸಿದರೇ ಲೈಮ್ ಲೈಟ್ ಆಗುವುದರಿಂದ ಯಾವಾಗಲೂ ದೂರವೇ ಉಳಿಯುತ್ತಾರೆ.
ಸದ್ಯ ಐಂದ್ರಿತಾ ರೇ ಸಿದ್ದಾರ್ಥ್ ಮಹೇಶ್ ಜೊತೆಗಿನ ಗರುಡ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಹೊಸದೆನಿಸುವ ಉತ್ಸಾಹ ಮೂಡಿಸುವ ಕಥೆಯಿರುವ ಸಿನಿಮಾಮದಲ್ಲಿ ನಟಿಸಲು ಐಂದ್ರಿತಾ ನಿರ್ಧರಿಸಿದ್ದಾರೆ. 
ಕೆಲ ತಿಂಗಳಲ್ಲಿ ಉತ್ತಮ  ಕಥೆಯುಳ್ಳ ಸ್ಕ್ರಿಪ್ಟ್ ಐಂದ್ರಿತಾ ಬಳಿ ಬಂದಿದ್ದವು, ಆದರೆ ಕಥೆ ಕೇಳಿದ ನಂತರ ತಮಗೆ ಇಷ್ಟವಾದ 2 ಸಿನಿಮಾಗಳಿಗೆ ಮಾತ್ರ ಅವರು ಸಹಿ ಮಾಡಿದ್ದಾರೆ.
ಚಿತ್ರಕ್ಕೆ ಸಹಿ ಹಾಕುವ ಮುನ್ನವೇ ಅದರ ಬಗ್ಗೆ ಚರ್ಚಿಸುವುದು ನನಗೆ ಇಷ್ಟವಿಲ್ಲ, ನಿರ್ದೇಶಕ ಮಹೇಶ್ ಜೊತೆಗಿನ ಅಯೋಗ್ಯ ಚಿತ್ರದ ಬಗ್ಗೆ ಅಗ್ರಿಮೆಂಟ್ ಗೂ ಮುನ್ನ ಸುದ್ದಿಯಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ನನ್ನ ಮತ್ತೊಂದು ಸಿನಿಮಾ ಮಾಲಿವುಡ್ ಚಿತ್ರ ತಂಡವೊಂದು ಕನ್ನಡ ಸಿನಿಮಾ ತಯಾರಿಸುತ್ತಿದ್ದು, ಅದರಲ್ಲಿ ತಾವು ನಟಿಸುತ್ತಿರುವುದಾಗಿ ಹೇಳಿದ್ದಾರೆ. ಈ ಪ್ರಾಜೆಕ್ಟ್ ಬಗ್ಗೆಗಿನ ಹೆಚ್ಚಿನ ವಿವರವನ್ನು ಸೂಕ್ತ ಸಮಯದಲ್ಲಿ ಹಂಚಿಕೊಳ್ಳುವುದಾಗಿ ಆ್ಯಂಡಿ ತಿಳಿಸಿದ್ದಾರೆ.
ಇನ್ನೂ ನಟಿ ಐಂದ್ರಿತಾ ತಮ್ಮ ಹಿಂದಿ ಸಿನಿಮಾ ಅಪ್ ಡೇಟ್ಸ್ ಬಗ್ಗೆ ಕಾಯುತ್ತಿದ್ದು, ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com