ರಾಜಸ್ತಾನ, ಸ್ಕಾಟ್ಲೆಂಡ್ ನಲ್ಲಿ ಅಂಜನೀಪುತ್ರ ಶೂಟಿಂಗ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅಂಜನೀಪುತ್ರ ಸಿನಿಮಾ ಶೂಟಿಂಗ್ ಶೇ.80 ರಷ್ಟು ...
ನಿರ್ದೇಶಕ ಹರ್ಷ, ಪುನಿತ್ ರಾಜ್ ಕುಮಾರ್ ಮತ್ತು ಹರಿಪ್ರಿಯಾ
ನಿರ್ದೇಶಕ ಹರ್ಷ, ಪುನಿತ್ ರಾಜ್ ಕುಮಾರ್ ಮತ್ತು ಹರಿಪ್ರಿಯಾ
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ  ಅಂಜನೀಪುತ್ರ ಸಿನಿಮಾ ಶೂಟಿಂಗ್ ಶೇ.80 ರಷ್ಟು ಪೂರ್ಣಗೊಂಡಿದೆ.
ಹರ್ಷ ನಿರ್ದೇಶನದ ಸಿನಿಮಾದಲ್ಲಿ ಬಾಲಿವುಡ್ ನಟ ಮುಖೇಶ್ ತಿವಾರಿ ಖಳನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳ ಶೂಟಿಂಗ್ ವೇಳೆ ಮುಖೇಶ್ ತಿವಾರಿ ಸಿಟಿ ಎಕ್ಸ್ ಪ್ರೆಸ್ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದರು.
ಸದ್ಯ ಚಿತ್ರದತಂಡ ರಾಜಸ್ತಾನದಲ್ಲಿ ಶೂಟಿಂಗ್ ನಡೆಸುತ್ತಿದ್ದು, ಕೆಲ ಸನ್ನಿವೇಶಗಳು ಬಾಕಿಯಿವೆ. ರಾಜಸ್ತಾನದ ನಂತರ ಹಾಡುಗಳ ಚಿತ್ರೀಕರಣಕ್ಕಾಗಿ ಸ್ಕಾಟ್ಲೆಂಡ್ ಗೆ ಚಿತ್ರತಂಡ ಪ್ರಯಾಣ ಬೆಳೆಸಲಿದೆ.
ಅಂಜನೀಪುತ್ರ ಸಿನಿಮಾದಲ್ಲಿ ರಮ್ಯಾಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎಂ.ಎನ್ ಕುಮಾರ್ ನಿರ್ಮಾಣ ಮಾಡುತ್ತಿದ್ದು, ಹವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com