ರಾಜಕೀಯ ಪ್ರವೇಶ ನಿರ್ಧರಿಸಿದ ಮೇಲೆ ನಿಮಗೆ ತಿಳಿಸುತ್ತೇನೆ: ರಜನಿಕಾಂತ್

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿರುವ ಸಮಯದಲ್ಲಿ, ತಾವು ಹಲವು ರಾಜಕೀಯ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದು,
ತಮಿಳು ಸೂಪರ್ ಸ್ಟಾರ್ ರಜನಿಕಾಂತ್
ತಮಿಳು ಸೂಪರ್ ಸ್ಟಾರ್ ರಜನಿಕಾಂತ್
Updated on: 
ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿರುವ ಸಮಯದಲ್ಲಿ, ತಾವು ಹಲವು ರಾಜಕೀಯ ಮುಖಂಡರೊಂದಿಗೆ ಮಾತುಕತೆ ನಡೆಸುತ್ತಿದ್ದು, ಅದು ಅಂತಿಮವಾದ ಮೇಲೆ ಘೋಷಣೆ ಮಾಡಲಿದ್ದೇನೆ ಎಂದಿದ್ದಾರೆ. 
ಆದರೆ ಯಾವ ಯಾವ ರಾಜಕೀಯ ನಾಯಕರ ಜೊತೆಗೆ ಭೇಟಿ ನಡೆಸಿದ್ದಾರೆ ಮತ್ತು ಅದರ ಉದ್ದೇಶವನೇನು ಎಂದು ಅವರು ಸ್ಪಷ್ಟಪಡಿಸಿಲ್ಲ. 
"ನಾನು ಅವರನ್ನು ಭೇಟಿ ಮಾಡಿರುವುದನ್ನು ಅಲ್ಲಗೆಳೆಯುವುದಿಲ್ಲ. ನಾನು ಚರ್ಚೆಗಳನ್ನು ನಡೆಸುತ್ತಿದ್ದೇನೆ ಮತ್ತು ಎಲ್ಲವು ಅಂತಿಮವಾದ ಮೇಲೆ ಘೋಷಣೆ ಮಾಡಲಿದ್ದೇನೆ" ಎಂದು ರಜನಿಕಾಂತ್ ಗುರುವಾರ ವರದಿಗಾರರಿಗೆ ಹೇಳಿದ್ದಾರೆ. 
ಈ ವಾರದ ಮೊದಲ ಭಾಗದಲ್ಲಿ ರಜನಿಕಾಂತ್ ಹಿಂದೂ ಮಕ್ಕಳ್ ಕಾಚಿ ಸದಸ್ಯರನ್ನು ಅವರ ಸ್ವಗೃಹದಲ್ಲಿ ಭೇಟಿಯಾಗಿದ್ದರು.
ಕಳೆದ ತಿಂಗಳು ಅವರ ಅಭಿಮಾನಿಗಳ ದೊಡ್ಡ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ರಜನಿ, ದೇವರ ಇಚ್ಛೆಯಿದ್ದರೆ ರಾಜಕೀಯಕ್ಕೆ ಬರುವುದಾಗಿ ಹೇಳಿದ್ದರು. 
ಈಗ ಸದ್ಯಕ್ಕೆ ರಜನಿ, ತಮಿಳು ಭೂಗತ ಲೋಕದ ಸಿನೆಮಾ 'ಕಾಲಾ' ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com