ಪ್ರಭಾಸ್ ಮುಂದಿನ ಚಿತ್ರದಲ್ಲಿ ವಿವೇಕ್ ಓಬಿರಾಯ್ ಮತ್ತು ಜಾಕಿ ಶ್ರಾಫ್?

ಪ್ರಭಾಸ್ ನಟಿಸಲಿರುವ ಇನ್ನು ಹೆಸರಿಡದ ಮುಂದಿನ ತ್ರಿಕೋನ ಆಕ್ಷನ್ ಚಿತ್ರಕ್ಕೆ ನಟ ವಿವೇಕ್ ಓಬಿರಾಯ್ ಮತ್ತು ಜಾಕಿ ಶ್ರಾಫ್ ಅವರನ್ನು ಪರಿಗಣಿಸಲಾಗುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿಯಲಾಗಿದೆ.
ಪ್ರಭಾಸ್- ವಿವೇಕ್ ಓಬಿರಾಯ್- ಜಾಕಿ ಶ್ರಾಫ್
ಪ್ರಭಾಸ್- ವಿವೇಕ್ ಓಬಿರಾಯ್- ಜಾಕಿ ಶ್ರಾಫ್
Updated on: 
ಚನ್ನೈ: ಪ್ರಭಾಸ್ ನಟಿಸಲಿರುವ ಇನ್ನು ಹೆಸರಿಡದ ಮುಂದಿನ ತ್ರಿಕೋನ ಆಕ್ಷನ್ ಚಿತ್ರಕ್ಕೆ ನಟ ವಿವೇಕ್ ಓಬಿರಾಯ್ ಮತ್ತು ಜಾಕಿ ಶ್ರಾಫ್ ಅವರನ್ನು ಪರಿಗಣಿಸಲಾಗುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿಯಲಾಗಿದೆ. 
"ಇಬ್ಬರೊಂದಿಗೂ ಮಾತುಕತೆ ಜಾರಿಯಲ್ಲಿದೆ. ಅಧಿಕೃತವಾಗಿ ಇನ್ನು ಇಬ್ಬರು ಸಹಿ ಮಾಡಿಲ್ಲ. ಅಧಿಕೃತ ಘೋಷಣೆಗೆ ಇನ್ನು ಕೆಲವು ದಿನ ಹಿಡಿಯಬಹುದು" ಎಂದು ಸಿನೆಮಾ ತಂಡದ ಮೂಲಗಳು ತಿಳಿಸಿವೆ. 
ಈ ಸಿನೆಮಾ ಏಕಕಾಲಕ್ಕೆ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಚಿತ್ರೀಕರಣಗೊಳ್ಳುತ್ತಿರುವುದಕ್ಕೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ನಟರ ಆಯ್ಕೆಗೆ ಆಸಕ್ತಿ ತೋರಲಾಗಿದೆ. 
"ವಿವೇಕ್ ಮತ್ತು ಜಾಕಿ ಅವರಿಗೆ ಭಾರತದಾದ್ಯಂತ ಜನಪ್ರಿಯತೆ ಇರುವುದರಿಂದ ಅವರನ್ನು ಪರಿಗಣಿಸಲಾಗುತ್ತಿದೆ. ಹೀರೋಯಿನ್ ಸಂಬಂಧಿಸಿದಂತೆ ಬಾಲಿವುಡ್ ನ ಜನಪ್ರಿಯ ನಟಿಯೊಬ್ಬರ ಆಯ್ಕೆಗೆ ಹುಡುಕಾಟ ನಡೆದಿದೆ" ಎಂದು ಮೂಲಗಳು ತಿಳಿಸಿವೆ.
೧೫೦ ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನೆಮಾ ಈ ತಿಂಗಳ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭಿಸಲಿದೆ ಎನ್ನಲಾಗಿದೆ. ಶಂಕರ್-ಎಹಸಾನ್-ಲಾಯ್ ಸಂಗೀತ ನೀಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com