ಸ್ಯಾಂಡಲ್ವುಡ್ ನ ಕುಚುಕುಗಳು ಎಂದು ಖ್ಯಾತರಾಗಿದ್ದ ಸುದೀಪ್ ಮತ್ತು ದರ್ಶನ್ ಸ್ನೇಹ ಅಂತ್ಯಗೊಂಡಿದೆ. ಸ್ವತಃ ದರ್ಶನ್ ಈ ಬಗ್ಗೆ ಟ್ವೀಟ್ ಮಾಡಿದ್ದು ನಾನು ಸುದೀಪ್ ಸ್ನೇಹಿತರಲ್ಲ ಎಂದು ಬರೆದುಕೊಂಡಿದ್ದಾರೆ.
ದರ್ಶನ್ ತಮ್ಮ ಟ್ವೀಟ್ ನಲ್ಲಿ ನಾನು ಸುದೀಪ್ ಸ್ನೇಹಿತರಲ್ಲ, ನಾವು ಕನ್ನಡ ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿರುವ ನಟರಷ್ಟೇ, ಇವತ್ತಿಗೆ ಎಲ್ಲವನ್ನು ಕೊನೆಗೊಳಿಸಿ. ಇನ್ನುಂದೆ ನಮ್ಮಿಬ್ಬರ ಮಧ್ಯೆ ಗೆಳೆತನವಿರಲ್ಲ. ದಯವಿಟ್ಟು ಯಾವುದೇ ಊಹಾಪೋಹಗಳು ಬೇಡ ಎಂದು ಟ್ವೀಟ್ ಮಾಡಿದ್ದಾರೆ.
Me & Sudeep aren't Friends Anymore. We are just Actors working for Kannada Industry. No more speculations please. That's the end of it.
ಯಾವುದೇ ಸಮಾರಂಭಗಳಾಗಲಿ, ಕಾರ್ಯಕ್ರಮಗಳಾಗಲಿ ಈ ಇಬ್ಬರು ನಟರು ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದೀಗ ದರ್ಶನ್ ಟ್ವೀಟ್ ಈ ನಟರಿಬ್ಬರ ಮಧ್ಯೆ ಯಾವುದು ಸರಿ ಇಲ್ಲ ಎಂದು ತೋರಿಸುತ್ತಿದೆ.