

ಬೆಂಗಳೂರು: ಕಿರಿಕ್ ಪಾರ್ಟಿ ಸಿನಿಮಾ ನಂತರ ಬಹಳಷ್ಟು ಜನಪ್ರಿಯತೆ ಗಳಿಸಿರುವ ರಶ್ಮಿಕಾ ಮಂದಣ್ಣ ಗೆ ಇದು ಪರೀಕ್ಷಾ ಸಮಯವಾಗಿದೆ.
ಎಂ.ಎಸ್ ರಾಮಯ್ಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಯಾಗಿರುವ ರಶ್ಮಿಕಾ ಮಂದಣ್ಣ ಜರ್ನಲಿಸಂ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಪತ್ರಿಕೋದ್ಯಮದ ಅಂತಿಮ ವರ್ಷದ ಪರೀಕ್ಷೆ ನಡೆಯಲಿದೆ.
ಟಾಲಿವುಡ್ ಗೆ ಎಂಟ್ರಿ ನೀಡಲು ಸಿದ್ಧತೆ ನಡೆಸುತ್ತಿರುವ ರಶ್ಮಿಕಾ ತೆಲುಗು ಕಲಿಯುತ್ತಿದ್ದಾರೆ, ಅಂಜನೀಪುತ್ರ ಚಿತ್ರದ ಶೂಟಿಂಗ್ ನಡುವೆ ತೆಲುಗು ಕ್ಲಾಸ್ ಮತ್ತು ಪರೀಕ್ಷೆಗೆ ತಯಾರಾಗುತ್ತಿರುವುದಾಗಿ ರಶ್ಮಿಕಾ ಹೇಳಿದ್ದಾರೆ.
ಶೂಟಿಂಗ್ ಹಿನ್ನೆಲೆಯಲ್ಲಿ ನಾನು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಲಿಲ್ಲ, ನನ್ನ ಟೀಚರ್ ನನಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ನನ್ನ ಸ್ನೇಹಿತರು ನನಗೆ ಸಹಾಯ ಮಾಡುತ್ತಾರೆ, ಪೂರ್ಣ ಪಠ್ಯದ ನೋಟ್ ಗಳನ್ನು ನನ್ನ ಸ್ನೇಹಿತರು ನೀಡಿದ್ದಾರೆ.
ನಾನು ಶಾಲೆ ಮತ್ತು ಕಾಲೇಜುಗಳಲ್ಲಿ ಡಿಸ್ಟಿಂಕ್ಷನ್ ವಿದ್ಯಾರ್ಥಿನಿಯಾಗಿದ್ದೆ, ಈ ಪರೀಕ್ಷೆಯಲ್ಲೂ ಉತ್ತಮ ಅಂಕಗಳಿಸುತ್ತೇನೆ ಎಂದು ರಶ್ಮಿಕಾ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.