ರಾಜಕೀಯಕ್ಕೆ ಸೇರಲು ನಿರ್ಧರಿಸಿದ್ದೇ ಆದರೆ, ಅಲ್ಲಿ ಕೆಟ್ಟವರ ಸೇರ್ಪಡೆಯನ್ನು ತಡೆಯುವೆ: ನಟ ರಜನಿಕಾಂತ್

ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರ್ಪಡೆಗೊಳ್ಳುತ್ತಿಲ್ಲ. ಒಂದು ವೇಳೆ ರಾಜಕೀಯಕ್ಕೆ ಸೇರ್ಪಡೆಗೊಳ್ಳುವ ಕುರಿತು ನಿರ್ಧಾರ ಕೈಗೊಂಡಿದ್ದೇ ಆದರೆ, ಕೆಟ್ಟವರು ಸೇರ್ಪಡೆಗೊಳ್ಳಲು ಆಸ್ಪದ ನೀಡುವುದಿಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಅವರು...
ಚೆನ್ನೈನಲ್ಲಿ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಿರುವ ನಟ ರಜನಿಕಾಂತ್
ಚೆನ್ನೈನಲ್ಲಿ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಿರುವ ನಟ ರಜನಿಕಾಂತ್
Updated on: 
ಚೆನ್ನೈ: ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರ್ಪಡೆಗೊಳ್ಳುತ್ತಿಲ್ಲ. ಒಂದು ವೇಳೆ ರಾಜಕೀಯಕ್ಕೆ ಸೇರ್ಪಡೆಗೊಳ್ಳುವ ಕುರಿತು ನಿರ್ಧಾರ ಕೈಗೊಂಡಿದ್ದೇ ಆದರೆ, ಕೆಟ್ಟವರು ಸೇರ್ಪಡೆಗೊಳ್ಳಲು ಆಸ್ಪದ ನೀಡುವುದಿಲ್ಲ ಎಂದು ಸೂಪರ್ ಸ್ಟಾರ್ ರಜನಿಕಾಂತ್ ಅವರು ಸೋಮವಾರ ಹೇಳಿದ್ದಾರೆ. 
8 ವರ್ಷಗಳ ಸುಧೀರ್ಘ ಅಂತರದ ಬಳಿಕ ಮತ್ತೆ ಅಭಿಮಾನಿಗಳನ್ನು ಭೇಟಿ ಮಾಡಿದ ನಟ ರಜನಿಕಾಂತ್ ಅವರು, ಚೆನ್ನೈನಲ್ಲಿ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. 
ಮೈತ್ರಿ ಪಕ್ಷವೊಂದಕ್ಕೆ ಬೆಂಬಲ ನೀಡುವ ಮೂಲಕ 21 ವರ್ಷಗಳ ಹಿಂದೆಯೇ ನಾನು ತಪ್ಪನ್ನು ಮಾಡಿದ್ದೆ. ಇದೊಂದು ಆಕಸ್ಮಿಕವಾಗಿ ಆದ ತಪ್ಪು. ಇಂತಹ ತಪ್ಪನ್ನು ಮತ್ತೆ ಮಾಡುವುದಿಲ್ಲ. ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿಲ್ಲ. ಒಂದು ವೇಳೆ ರಾಜಕೀಯಕ್ಕೆ ಎಂಟ್ರಿ ಕೊಡಲು ನಿರ್ಧಾರ ಕೈಗೊಂಡಿದ್ದೇ ಆದರೆ, ಕೆಟ್ಟ ಜನರು ಸೇರ್ಪಡೆಗೊಳ್ಳಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಅಂತಹವರು ದೂರ ಇರುವಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ. 
ಕೆಲ ರಾಜಕೀಯ ನಾಯಕರು ನನ್ನ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ನಾನೊಬ್ಬ ನಟನಾಗಿದ್ದು, ಅದೇ ಹಾದಿಯಲ್ಲಿ ನಡೆಯಬೇಕೆಂದು ದೇವರು ಬಯಸಿದ್ದಾರೆ. ದೇವರು ನನಗೆ ನೀಡಿರುವ ಕೆಲಸವನ್ನು ನಾನು ಮಾಡುತ್ತೇನೆ. ಭವಿಷ್ಯದಲ್ಲಿ ಏನಾಗುತ್ತದೆ ಎಂಬುದು ನನಗೆ ಗೊತ್ತಿಲ್ಲ. 
ಪ್ರಸ್ತುತ ಒಬ್ಬ ನಟನಾಗಿ ಜನರಿಗಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದೇನೆ. ತಮಿಳುನಾಡಿನ ಜನತೆ ಬುದ್ಧಿವಂತರಾಗಿದ್ದಾರೆ. ಕೇವಲ ಒಂದು ವಿಷಯದ ಬಗ್ಗೆ ಮಾತ್ರ ಅವರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ. ಆದರೆ, ಆದನ್ನು ನಾನು ಹೇಳುವುದಿಲ್ಲ. ನಾನು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದೇ ಆದರೆ, ಜನರ ಕಲ್ಯಾಣದ ಹೆಸರಿನಲ್ಲಿ ದುಡ್ಡು ಮಾಡಿಕೊಳ್ಳುತ್ತಿರುವವರನ್ನು ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com