ನಾನು ಉತ್ಸಾಹ ಕಳೆದುಕೊಂಡ ದಿನ ಕೆಲಸ ತೊರೆಯುತ್ತೇನೆ: ಕಮಲ್ ಹಾಸನ್

ಬೆಳ್ಳಿತೆರೆಯ ಮೇಲೆ ಹೊಸತಿಗಾಗಿ ಸದಾ ಮಿಡಿಯುವ ಮನಸ್ಸು ಕಮಲ್ ಹಾಸನ್. ದಕ್ಷಿಣ ಭಾರತದ ಭಾಷೆಗಳಲ್ಲೇ ಅಲ್ಲದೆ ಬಾಲಿವುಡ್ ಚಿತ್ರರಂಗದಲ್ಲಿಯೂ ಮನೆಮಾತಾಗಿರುವ ಈ ನಟ ಹೊಸ ತಂತ್ರಜ್ಞಾವನ್ನು
ಕಮಲ್ ಹಾಸನ್
ಕಮಲ್ ಹಾಸನ್
Updated on: 
ಚೆನ್ನೈ: ಬೆಳ್ಳಿತೆರೆಯ ಮೇಲೆ ಹೊಸತಿಗಾಗಿ ಸದಾ ಮಿಡಿಯುವ ಮನಸ್ಸು ಕಮಲ್ ಹಾಸನ್. ದಕ್ಷಿಣ ಭಾರತದ ಭಾಷೆಗಳಲ್ಲೇ ಅಲ್ಲದೆ ಬಾಲಿವುಡ್ ಚಿತ್ರರಂಗದಲ್ಲಿಯೂ ಮನೆಮಾತಾಗಿರುವ ಈ ನಟ ಹೊಸ ತಂತ್ರಜ್ಞಾವನ್ನು ಕೂಡಲೇ ಅಳವಡಿಸಿಕೊಳ್ಳುವಲ್ಲಿ ನಿಪುಣರು. ನೃತ್ಯ ನಿರ್ದೇಶನ, ನಟನೆ, ನಿರ್ದೇಶನ, ಚಿತ್ರಕಥೆ ರಚನೆ ಮತ್ತು ನಿರ್ಮಾಣ, ಹೀಗೆ ಎಲ್ಲ ವಿಭಾಗದಲ್ಲಿಯೂ ತಮ್ಮ ಪ್ರತಿಭೆಯನ್ನು ಮೆರೆದಿರುವ ನಟ ಈಗ ಜನಪ್ರಿಯ ಟಿವಿ ರಿಯಾಲಿಟಿ ಕಾರ್ಯಕ್ರಮ ಬಿಗ್ ಬಾಸ್ ನ ತಮಿಳು ಅವತರಿಣಿಕೆಯ ನಿರ್ವಾಹಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಜೂನ್ ೨೫ ರಿಂದ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ೧೪ ತಾರೆಯರು ಭಾಗವಹಿಸಿ, ಬಹುಮಾನಕ್ಕೆ ಸೆಣಸಲಿದ್ದಾರೆ. 
ಯಾವುದೇ ಕೆಲಸವಾಗಲಿ ಸದಾ ಉತ್ಸಾಹದಿಂದ ಇರುವ ನಟ "ಉತ್ಸಾಹ ಕಳೆಗುಂದಿದ ದಿನ ನಾನು ಈ ಕೆಲಸ ಬಿಡುತ್ತೇನೆ" ಎಂದು ನಗುತ್ತ ತಿಳಿಸುತ್ತಾರೆ. ಈ ಕಾರ್ಯಕ್ರಮ ನಿರ್ವಾಹಕನಾಗಿ ತಮ್ಮ ವಿಶಿಷ್ಟತೆಯನ್ನು ಹೇಗೆ ಮೆರೆಯುತ್ತೀರಿ ಎಂಬ ಪ್ರಶ್ನೆಗೆ "ನಾನು ಬೇರೆ ಯಾರ ರೀತಿಯನ್ನು ನಕಲು ಮಾಡುವುದಿಲ್ಲ. ನಾನು ನಾನಷ್ಟೇ, ಮತ್ತು ನಾನು ನಿರ್ವಹಿಸುವ ಪಾತ್ರವಷ್ಟೆ" ಎನ್ನುವ ಕಮಲ್ "ನಾನು ಸಾಕಷ್ಟು ಸಾಧಿಸಿದ್ದೇನೆ ಎಂದು ನೀವು ತಿಳಿದಿರಬಹುದು ಆದರೆ ಅದನ್ನು ಲೆಕ್ಕ ಹಾಕುವ ನಿಮ್ಮ ಬಗೆ ಮತ್ತು ನನ್ನದು ವಿಭಿನ್ನ. ಬಿಗ್ ಬಾಸ್ ನನ್ನ ಸಾಧನೆಗೆ ಸಹಕರಿಸಲಿದೆ" ಎನ್ನುತ್ತಾರೆ. 
"ಪ್ರತಿ ಮನೆಗೂ ನಾನು ತಲುಪುವುದಕ್ಕೆ ಬಿಗ್ ಬಾಸ್ ಸಹಕರಿಸಲಿದೆ ಮತ್ತು ಈ ಕಾರ್ಯಕ್ರಮದ ಜನಪ್ರಿಯತೆಯನ್ನು ಪರಿಗಣಿಸಿದರೆ ಅದು ಸ್ವಾಭಾವಿಕವಾಗಿ ಸಾಧ್ಯ" ಎನ್ನುತ್ತಾರೆ ಕಮಲ್. 
ಈ ಕಾರ್ಯಕ್ರಮ ತಮ್ಮ ಸಿನೆಮಾ ಚಟುವಟಿಕೆಗಳಿಗೆ ಅಡ್ಡಿ ಮಾಡಲಿದೆಯೇ ಎಂಬ ಪ್ರಶ್ನೆಗೆ ಸೆಟ್ ಗೆ ಪ್ರತಿ ವಾರ ಒಮ್ಮೆ ಶನಿವಾರ ಹೋಗಬೇಕಾದುತ್ತದೆ ಎನ್ನುವ ನಟ "ಅಮಿತಾಬ್ ಬಚ್ಚನ್ ಮತ್ತು ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದ ಕಾರ್ಯಕ್ರಮವನ್ನು ನಾನು ನೋಡಿದ್ದೇನೆ. ಸಲ್ಮಾನ್ ಖಾನ್ ನಿಭಾಯಿಸುತ್ತಿದ್ದ ರೀತಿ ನನಗೆ ಬಹಳ ಮೆಚ್ಚುಗೆಯಾಯಿತು. ಅವರು ಸ್ಟಾರ್ ಗಿರಿ ತೊರೆದು ಅದರಲ್ಲಿ ಭಾಗಿಯಾಗುತ್ತಿದ್ದರು ಮತ್ತು ಅದು ಸರಿಯಾದ ನಡೆ ಎಂದು ನನಗೆ ಅನ್ನಿಸುತ್ತೆ" ಎನ್ನುವ ಅವರು "ನನಗೆ ಬೇಕಾಗಿರುವುದು ಮತ್ತು ವೀಕ್ಷಕರಿಗೆ ಬೇಕಾಗಿರುವುದು ಬೇರೆ ಬೇರೆಯಾಗಿರಬಹುದು ಎಂಬ ಅರಿವು ನನಗಿದೆ. ಆದರೆ ಇದನ್ನು ಸರಿದೂಗಿಸಬಹುದು ಎಂದು ನಾನು ತಿಳಿದಿದ್ದೇನೆ" ಎನ್ನುತ್ತಾರೆ. 
'ಸತ್ಯಮೇವೆ ಜಯತೆ' ಕಾರ್ಯಕ್ರಮವನ್ನು ಮಾಡಬಹುದಾಗಿದ್ದರೂ 'ಬಿಗ್ ಬಾಸ್' ಆಯ್ಕೆ ಮಾಡಿಕೊಂಡದ್ದೇಕೆ ಎಂಬ ಪ್ರಶ್ನೆಗೆ "ನನ್ನ ಸಾಮಾಜಿಕ ಕಳಕಳಿ ಪ್ರದರ್ಶಿಸಲು ನನಗೆ ಟಿವಿ ಕಾರ್ಯಕ್ರಮದ ಅವಶ್ಯಕತೆ ಇಲ್ಲ. ಆ ಕಾರ್ಯಕ್ರಮ ನಡೆಸಿಕೊಟ್ಟ ವ್ಯಕ್ತಿಗಿಂತಲೂ ನಾನು ಹೆಚ್ಚು ಸಾಮಾಜಿಕ ಕಳಕಳಿ ಉಳ್ಳವನು ಎಂದು ಹೆಮ್ಮೆಯಿಂದ ಹೇಳಬಲ್ಲೆ" ಎನ್ನುತ್ತಾರೆ. 
ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಊಹಾಪೋಹಗಳ ಬಗ್ಗೆ ಕಮಲ್ ಅವರ ಗಮನ ಸೆಳೆಯಲು ಯತ್ನಿಸಿದಾಗ "ಅದಕ್ಕಾಗಿ ನಾವು ಮತ್ತೊಂದು ಪತ್ರಿಕಾ ಗೋಷ್ಠಿ ಕರೆಯೋಣ" ಎಂಬ ಹಾಸ್ಯ ಚಟಾಕಿ ಹಾರಿಸಿ ಮಾತು ಮುಗಿಸುತ್ತಾರೆ ನಟ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com