ಸಿನಿಮಾ ಶೂಟಿಂಗ್ ವೇಳೆ ಅವಘಡ: ಕೂದಲೆಳೆ ಅಂತರದಲ್ಲಿ ಪಾರಾದ ಶಾರೂಖ್ ಖಾನ್

ಲಿವುಡ್‌ ಸೂಪರ್‌ ಸ್ಟಾರ್ ಶಾರುಖ್‌ ಖಾನ್‌ ಆನಂದ್‌ ಎಲ್‌ ರಾಯ್‌ ಅವರ ಹೊಸ ಚಿತ್ರದ ಶೂಟಿಂಗ್‌ನಲ್ಲಿ ಸಂಭವಿಸಿದ ಅವಘಡದಲ್ಲಿ ಯಾವುದೇ ಗಾಯಗಳಿಲ್ಲದೆ ...
ಶಾರೂಖ್ ಖಾನ್
ಶಾರೂಖ್ ಖಾನ್
Updated on: 
ಮುಂಬಯಿ: ಬಾಲಿವುಡ್‌ ಸೂಪರ್‌ ಸ್ಟಾರ್ ಶಾರುಖ್‌ ಖಾನ್‌ ಆನಂದ್‌ ಎಲ್‌ ರಾಯ್‌ ಅವರ ಹೊಸ ಚಿತ್ರದ ಶೂಟಿಂಗ್‌ನಲ್ಲಿ ಸಂಭವಿಸಿದ ಅವಘಡದಲ್ಲಿ  ಯಾವುದೇ ಗಾಯಗಳಿಲ್ಲದೆ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. 
ಶಾರುಖ್‌ ಖಾನ್‌ ಅವರು ಶೂಟಿಂಗ್‌ಗೆ ಸಿದ್ಧರಾಗಿ ಕುಳಿತಿದ್ದ ಸ್ಥಳದ ಮುಂಭಾಗದಲ್ಲೇ ಮೇಲ್ಚಾವಣಿಯ ದೊಡ್ಡ ಭಾಗ ಕುಸಿದು ಬಿತ್ತು; ಶಾರುಖ್‌ ಕೂದಲೆಳೆಯ ಅಂತರದಲ್ಲಿ ಪಾರಾದರು; ಆದರೆ ಶೂಟಿಂಗ್‌ ಸಿಬಂದಿಗಳಿಬ್ಬರು ಗಾಯಗೊಂಡರು ಎಂದು ಪತ್ರಿಕೆಯೊಂದು ವರದಿ ಮಾಡಿದೆ. 
ಈ ಅವಘಡದ ಪರಿಣಾಮವಾಗಿ ಶಾರುಖ್‌ ಶೂಟಿಂಗನ್ನು ಎರಡು ದಿನಗಳ ಮಟ್ಟಿಗೆ ಮುಂದೂಡಲಾಗಿದೆ. ಶಾರುಖ್‌ ಅವರ ಈ ಹೊಸ ಚಿತ್ರದಲ್ಲಿ ಅನುಷ್ಕಾ ಶರ್ಮಾ ಮತ್ತು ಕತ್ರೀನಾ ಕೈಫ್ ಕೂಡ ಇದ್ದಾರೆ.
ಯಶ್‌ ಚೋಪ್ರಾ ಅವರ ಜಬ್‌ ತಕ್‌ ಹೈ ಜಾನ್‌ ಚಿತ್ರದ ಬಳಿಕ ಇದೀಗ ಎರಡನೇ ಬಾರಿ ಶಾರುಖ್‌, ಅನುಷ್ಕಾ ಮತ್ತು ಕತ್ರೀನಾ ಜತೆಯಾಗಿ ನಟಿಸುತ್ತಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com