ರಜನಿಕಾಂತ್ ಅಭಿನಯದ ಕರಿಕಾಳನ್ ಚಿತ್ರದ ವಿರುದ್ದ ದೂರು

ರಜನಿಕಾಂತ್ ಅಭಿನಯದ ಕರಿಕಾಳನ್ ಸಿನಿಮಾ ಶೂಟಿಂಗ್ ಗಾಗಿ ಭರದ ಸಿದ್ಧತೆ ನಡೆಯುತ್ತಿದೆ. ಇದೇ ವೇಳೆ ಕಾಳ ಕರಿಕಾಳನ್‌' ಚಿತ್ರದ ವಿರುದ್ಧ ಸ್ಕ್ರಿಫ್ಟ್‌ ರೈಟರ್‌ ರಾಜ್‌ಶೇಖರ್‌ ...
ಕರಿಕಾಳನ್ ಸಿನಿಮಾ ಪೋಸ್ಟರ್
ಕರಿಕಾಳನ್ ಸಿನಿಮಾ ಪೋಸ್ಟರ್
Updated on
ಚೆನ್ನೈ: ರಜನಿಕಾಂತ್ ಅಭಿನಯದ ಕರಿಕಾಳನ್ ಸಿನಿಮಾ ಶೂಟಿಂಗ್ ಗಾಗಿ ಭರದ ಸಿದ್ಧತೆ ನಡೆಯುತ್ತಿದೆ. ಇದೇ ವೇಳೆ ಕಾಳ ಕರಿಕಾಳನ್‌' ಚಿತ್ರದ ವಿರುದ್ಧ ಸ್ಕ್ರಿಫ್ಟ್‌ ರೈಟರ್‌ ರಾಜ್‌ಶೇಖರ್‌ ಅಲಿಯಾಸ್‌ ನಾಗರಾಜ್‌ ಎನ್ನುವವರು ಚೆನ್ನೈ ಪೊಲೀಸ್‌ ಕಮಿಷನರ್‌ ಬಳಿ ದೂರು ದಾಖಲಿಸಿದ್ದಾರೆ.
ಕರಿಕಾಳನ್‌ ಟೈಟಲ್‌ ತನ್ನ ಒಡೆತನದಲ್ಲಿರುವುದಾಗಿ ಹೇಳಿಕೊಂಡಿರುವ ಕರಿಪಕ್ಕಮ್‌ನ ಭಾರತಿ ಸಲೈ ನಿವಾಸಿಯಾದ ನಾಗರಾಜ್‌, ತಾನು 1995 ರಲ್ಲಿ ಸೌತ್‌ ಇಂಡಿಯನ್‌ ಫಿಲ್ಮ್‌ ಛೆಂಬರ್‌ ನಲ್ಲಿ ಕರಿಕಾಳನ್‌ ಟೈಟಲ್‌ ರಿಜಿಸ್ಟರ್‌ ಮಾಡಿರುವುದಾಗಿ ದೂರು ನೀಡಿದ್ದಾರೆ. 
ಚೋಳ ಸಾಮ್ರಾಜ್ಯದ ರಾಜ ಕರಿಕಾಳನ್‌ ಲೈಫ್‌ ಸ್ಟೋರಿ ಆಧಾರಿತ ಸ್ಕ್ರಿಫ್ಟ್‌ ಬರೆಯುತ್ತಿದ್ದೆ. ಜತೆಗೆ ಈ ಸಿನಿಮಾದಲ್ಲಿ ಆ್ಯಕ್ಟ್‌ ಮಾಡಲು 'ರಜನಿಕಾಂತ್‌ ಅವರ ಜೊತೆ ಮಾತನಾಡಿದ್ದೆ, ನಂತರ ಹೊಸ ಪ್ರಾಜೆಕ್ಟ್ ಬಗ್ಗೆ ಚರ್ಚೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ, 
ನಂತರ ವಿಕ್ರಮ್ ಅವರನ್ನು ಈ ಸಿನಿಮಾದಲ್ಲಿ ಹಾಕಿಕೊಂಡು ಸಿನಿಮಾ ತಯಾರಿಸಲು ಪ್ರಯತ್ನಿಸಿದೆ ಎಂದು ಹೇಳಿರುವ  ಕರಿಕಾಳನ್‌ ಟೈಟಲ್‌ ನನ್ನದಾಗಿದ್ದು, ಇದನ್ನು ಬಳಸಿಕೊಂಡ ಚಿತ್ರತಂಡದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾಗರಾಜ್‌ ಆಗ್ರಹಿಸಿದ್ದಾರೆ. 
ಆದರೆ ಈ ಸಂಬಂಧ ಪ್ರತಿಕ್ರಿಯಿಸಲು ಕರಿಕಾಳನ್ ಚಿತ್ರತಂಡ ಸಂಪರ್ಕಕ್ಕೆ ಸಿಗಲಿಲ್ಲ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com