ಹೌರಾ ಬ್ರಿಡ್ಜ್ ನಲ್ಲಿ ದೇವಕಿಯಾಗಿ ಪ್ರಿಯಾಂಕಾ ಉಪೇಂದ್ರ!

ನಿರ್ದೇಶಕ ಲೋಹಿತ್ ಹೌರಾ ಬ್ರಿಡ್ಜ್ ಸಿನಿಮಾದ ಶೇ.80 ರಷ್ಟು ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಈ ವೇಳೆ ಚಿತ್ರದಲ್ಲಿ ಪ್ರಿಯಾಂಕಾ ಪಾತ್ರದ ಬಗ್ಗೆ ಸಣ್ಣ ಮಾಹಿತಿ ...
ಹೌರಾ ಬ್ರಿಡ್ಜ್ ಪೋಸ್ಟರ್
ಹೌರಾ ಬ್ರಿಡ್ಜ್ ಪೋಸ್ಟರ್
ಬೆಂಗಳೂರು: ನಿರ್ದೇಶಕ ಲೋಹಿತ್ ಹೌರಾ ಬ್ರಿಡ್ಜ್ ಸಿನಿಮಾದ ಶೇ.80 ರಷ್ಟು ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಈ ವೇಳೆ ಚಿತ್ರದಲ್ಲಿ ಪ್ರಿಯಾಂಕಾ ಪಾತ್ರದ ಬಗ್ಗೆ ಸಣ್ಣ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ನಟಿ ಪ್ರಿಯಾಂಕಾ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಥ್ರಿಲ್ಲರ್ ಸಿನಿಮಾ ಮಮ್ಮಿ ಸೇವ್ ಮಿ ನಂತರ ಎರಡನೇ ಬಾರಿಗೆ ಲೋಹಿತ್ ಮತ್ತು ಪ್ರಿಯಾಂಕ ಹೌರಾ ಬ್ರಿಡ್ಜ್ ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.
ಪ್ರಿಯಾಂಕಾ ಭಯಗೊಂಡು ಓಡುತ್ತಿರುವ ಚಿತ್ರ ಪೋಸ್ಟರ್ ನಲ್ಲಿದೆ. ಪ್ರಿಯಾಂಕಾ ದೇವಕಿ ಪಾತ್ರದಲ್ಲಿ ನಟಿಸಿದ್ದು, ಹೋಟೆಲ್ ವೊಂದರಲ್ಲಿ ರಿಸೆಪ್ಷನಿಸ್ಟ್ ಕೆಲಸ ಮಾಡುತ್ತಿರುತ್ತಾರೆ, ನಂತರ ಕಿವುಡ ಮತ್ತು ಮೂಕರ ಶಾಲೆಯಲ್ಲೂ ಕೆಲಸ ಮಾಡುತ್ತಿರುತ್ತಾರೆ ಎಂದು ಲೋಹಿತ್ ಹೇಳಿದ್ದಾರೆ.
ಇನ್ನೂ ಸಿನಿಮಾದಲ್ಲಿ ಕಿಶೋರ್  ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ, ಬಾಲಿವುಡ್ ನಟ ಸಂಜೀವ್ ಜೈಸ್ವಾಲ್  ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ, ಜೊತೆಗೆ ಪ್ರಿಯಾಂಕಾ ಪುತ್ರಿ ಐಶ್ವರ್ಯಾ ಉಪೇಂದ್ರ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com