ಶಶಾಂಕ್‌ 'ತಾಯಿಗೆ ತಕ್ಕ ಮಗ'ನಿಗೆ ಆಶಿಕಾ ರಂಗನಾಥ್ ನಾಯಕಿ

ನಿರ್ದೇಶಕ ಶಶಾಂಕ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ತಾಯಿಗೆ ತಕ್ಕ ಮಗ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ...
ಆಶಿಕಾ ರಂಗನಾಥ್
ಆಶಿಕಾ ರಂಗನಾಥ್
ನಿರ್ದೇಶಕ ಶಶಾಂಕ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ತಾಯಿಗೆ ತಕ್ಕ ಮಗ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 
ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅಜೇಯ್ ರಾವ್ ನಾಯಕನಾಗಿ ಅಭಿನಯಿಸುತ್ತಿದ್ದು ಅಜೇಯ್ ಗೆ ತಾಯಿಯಾಗಿ ಸುಮಲತಾ ಅಂಬರೀಶ್ ನಟಿಸುತ್ತಿದ್ದಾರೆ. ನಾಯಕಿ ಆಯ್ಕೆಯಲ್ಲಿ ತೊಡಗಿದ್ದ ಶಶಾಂಕ್ ಅವರು ಸುಮಾರು 150ಕ್ಕೂ ಹೆಚ್ಚು ಮಂದಿಯನ್ನು ಆಡಿಷನ್ ಮಾಡಿದ್ದು ಯಾರೂ ಆಯ್ಕೆಯಾಗಿರಲಿಲ್ಲ. ಹಾಗಾಗಿ ಚಿತ್ರರಂಗದಲ್ಲಿ ಬಿಝಿಯಾಗಿರುವ ನಟಿಯನ್ನೇ ನಾಯಕಿಯನ್ನಾಗಿಸಲು ನಿರ್ಧರಿಸಿದ್ದಾರೆ. 
ಕ್ರೇಜಿಬಾಯ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಆಶಿಕಾ ಮಾಸ್ ಲೀಡರ್, ರಾಜು ಕನ್ನಡ ಮೀಡಿಯಂ, ರ್ಯಾಂಬೋ-2 ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ವೇದಗುರು ನಿರ್ದೇಶಿಸುತ್ತಿದ್ದಾರೆ. ಇದು ನಾಯಕ ಅಜೇಯ್ ರಾವ್ ಅವರ 25ನೇ ಚಿತ್ರ. ಡಿಸೆಂಬರ್ 8 ರಿಂದು ಚಿತ್ರೀಕರಣ ಆರಂಭವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com