ಪಿಆರ್ ಕೆ
ಪಿಆರ್ ಕೆ

ಅಂಜನಿಪುತ್ರ ಸಿನಿಮಾ ಮೂಲಕ ಪಿಆರ್ ಕೆ ಮ್ಯೂಸಿಕ್ ಗೆ ಚಾಲನೆ

ಪುನೀತ್ ರಾಜ್ ಕುಮಾರ್ ಗೆ ಅಂಜನಿಪುತ್ರ ಸಿನಿಮಾ ವಿಶೇಷವಾದ ಸಿನಿಮಾ ಆಗಿದೆ. ಏಕೆಂದರೆ ಪಿಆರ್ ಕೆ ಆಡಿಯೋ ಸಂಗೀತ ಹಕ್ಕುಗಳನ್ನು ಪಡೆದಿರುವ ಮೊದಲ ಸಿನಿಮಾ ಅಂಜನಿ ಪುತ್ರ ಆಗಿದೆ.
ಪುನೀತ್ ರಾಜ್ ಕುಮಾರ್ ಗೆ ಅಂಜನಿಪುತ್ರ ಸಿನಿಮಾ ವಿಶೇಷವಾದ ಸಿನಿಮಾ ಆಗಿದೆ. ಏಕೆಂದರೆ ಪಿಆರ್ ಕೆ ಆಡಿಯೋ ಸಂಗೀತ ಹಕ್ಕುಗಳನ್ನು ಪಡೆದಿರುವ ಮೊದಲ ಸಿನಿಮಾ ಅಂಜನಿ ಪುತ್ರ ಆಗಿದೆ. 
ಪಿಆರ್ ಕೆ ಮೂಲಕ ನಟ ಪುನೀತ್ ರಾಜ್ ಕುಮಾರ್ ಸಂಗೀತ ಉದ್ಯಮಕ್ಕೂ (ಮ್ಯೂಸಿಕ್ ಇಂಡಸ್ಟ್ರಿ)ಗೂ ಪ್ರವೇಶಿಸಿದ್ದು, ಪಾರ್ವತಮ್ಮ ರಾಜ್ ಕುಮಾರ್ ಫಿಲ್ಮ್ಸ್ ಮೂಲಕ ನಿರ್ವಹಣೆಯಾಗಲಿದೆ. ನ.24 ರಂದು ನಡೆಯಲಿರುವ ಅಂಜನಿ ಪುತ್ರದ ಆಡಿಯೋ ಬಿಡುಗಡೆಯ ವೇಳೆಯಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ. 
ಡಾ.ರಾಜ್ ಕುಮಾರ್ ಅವರಂತೆಯೇ ಪುನೀತ್ ರಾಜ್ ಕುಮಾರ್ ಸಹ ಗಾಯನದಲ್ಲೂ ಆಸಕ್ತಿ ಹೊಂದಿದ್ದು, ಪುನೀತ್ ರಾಜ್ ಕುಮಾರ್ ಅವರ ಸಂಗೀತ ಕ್ಷೇತ್ರದ ಆಸಕ್ತಿಗೆ ಪಿಆರ್ ಕೆ ಸಹಕಾರಿಯಾಗಲಿದೆ. ಇದೇ ವೇಳೆ ಟಗರು ಚಿತ್ರದ ಸಂಗೀತದ ಹಕ್ಕುಗಳನ್ನೂ ಆಡಿಯೋ ಸಂಸ್ಥೆ ಖರೀದಿಸಿದ್ದು, ಪಿಆರ್ ಕೆಯ ಎರಡನೇ ಚಿತ್ರ ಇದಾಗಿರಲಿದೆ. 

Related Stories

No stories found.

Advertisement

X
Kannada Prabha
www.kannadaprabha.com