ಚೆನ್ನೈನ ಅಳ್ವಾರ್ ತಿರುನಗರ್ ನಿವಾಸದಲ್ಲಿ ಅಶೋಕ್ ಕುಮಾರ್ ಅವರ ಮೃತ ದೇಹ ಪತ್ತೆಯಾಗಿದ್ದು, ಒಂದು ಡೆತ್ ನೋಟ್ ಕೂಡ ಪತ್ತೆಯಾಗಿದೆ. ಡೆತ್ ನೋಟ್ ನಲ್ಲಿ ತಮ್ಮ ಸಾವಿಗೆ ಸಾಲಗಾರರ ಕಿರುಕುಳವೇ ಕಾರಣ ಎಂದು ಅಶೋಕ್ ಕುಮಾರ್ ಹೇಳಿಕೊಂಡಿದ್ದಾರೆ. ತಮ್ಮ 7 ವರ್ಷಗಳ ಸ್ನೇಹಿತ ಹಾಗೂ ಮಧುರೈ ಮೂಲದ ಓರ್ವ ಫೈನಾನ್ಶಿಯರ್ ರಿಂದ ಅಶೋಕ್ ಸಾಲ ಪಡೆದಿದ್ದರಂತೆ. ಆದರೆ ಇತ್ತೀಚೆಗೆ ಸಾಲ ವಾಪಸ್ ಮಾಡುವಂತೆ ಸಾಲ ನೀಡಿದ್ದಾತ ಕಿರುಕುಳ ನೀಡುತ್ತಿದ್ದ. ಆತನ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ ಎಂದು ಅಶೋತ್ ಕುಮಾರ್ ಡೆತ್ ನೋಟ್ ನಲ್ಲಿ ಬರೆದಿದ್ದಾರೆ.