ಮದುವೆಯಾಗಲು ಹೆಣ್ಣು ಬೇಕು ಎಂಬ ತಮಿಳು ನಟನ ವಿಡಿಯೋ ವೈರಲ್

ಕಾಲಿವುಡ್ ನಟ ಆರ್ಯ ಮದುವೆಯಾಗಲೂ ಹುಡುಗಿ ಬೇಕು ಎಂದು ಹೇಳಿ ಅದನ್ನು ವಿಡಿಯೋ ಮಾಡಿ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು ಈ ವಿಡಿಯೋ ಇದೀಗ...
ಆರ್ಯ
ಆರ್ಯ
ಮುಂಬೈ: ಕಾಲಿವುಡ್ ನಟ ಆರ್ಯ ಮದುವೆಯಾಗಲೂ ಹುಡುಗಿ ಬೇಕು ಎಂದು ಹೇಳಿ ಅದನ್ನು ವಿಡಿಯೋ ಮಾಡಿ ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. 
ತಮಿಳಿನ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ 36 ವರ್ಷದ ಆರ್ಯ ಅವರು ಮದುವೆಯಾಗಲು ಹೆಣ್ಣು ಬೇಕು ಎಂದು ಹೇಳಿರುವ ವಿಡಿಯೋ ಇದೀಗ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ. ಆರ್ಯ ಈ ಹಿಂದೆ ತನ್ನ ಜಿಮ್ ಸ್ನೇಹಿತರೊಂದಿಗೆ ತಮ್ಮ ಮದುವೆ ಬಗ್ಗೆ ಮಾತನಾಡುತ್ತಿದ್ದಾಗ ಅದನ್ನು ವಿಡಿಯೋ ಮಾಡಿದ್ದವರು ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದರು. 
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಮಾತನಾಡಿರುವ ಆರ್ಯ, ನನ್ನ ಮದುವೆಗೆ ಸಂಬಂಧಿಸಿದಂತೆ ಒಂದು ವಿಡಿಯೋ ಲೀಕ್ ಆಗಿದೆ. ಅದನ್ನು ನನ್ನ ಸ್ನೇಹಿತರು ಅಪ್ ಲೋಡ್ ಮಾಡಿದ್ದಾರೆ. ಆದರೆ ಅದರಲ್ಲಿರುವ ಮಾತು ಸತ್ಯ ನಾನು ಮದುವೆಯಾಗಲೂ ಹುಡುಗಿ ಹುಡುಕುತ್ತಿದ್ದೇನೆ. ನನಗೆ ಯಾವುದೇ ಬೇಡಿಕೆ, ಷರತ್ತು ಇಲ್ಲ. ನಿಮಗೆ ನಾನು ಇಷ್ಟವಾದರೆ ಕರೆ ಮಾಡಿ ಎಂದು ನಂಬರ್ ಹೇಳಿ ಮಾತನಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com