ಸಿಂಪಲ್ ಮದುವೆಯಂತೆ! ಆದರೆ ಬಜೆಟ್ ಮಾತ್ರ 10 ಕೋಟಿ?

ಟಾಲಿವುಡ್ ನ ​ಸೂಪರ್ ಸ್ಟಾರ್ ನಾಗಾರ್ಜುನ ಅವರ ಪುತ್ರ ನಾಗಚೈತನ್ಯ ಹಾಗೂ ಸ್ಟಾರ್ ನಟಿ ಸಮಂತಾ ವಿವಾಹವಾಗುತ್ತಿರುವುದು ಗೊತ್ತಿರುವ ವಿಚಾರವೇ...
ಸಮಂತಾ, ನಾಗಚೈತನ್ಯ
ಸಮಂತಾ, ನಾಗಚೈತನ್ಯ
ಟಾಲಿವುಡ್ ನ ​ಸೂಪರ್ ಸ್ಟಾರ್ ನಾಗಾರ್ಜುನ ಅವರ ಪುತ್ರ ನಾಗಚೈತನ್ಯ ಹಾಗೂ ಸ್ಟಾರ್ ನಟಿ ಸಮಂತಾ ವಿವಾಹವಾಗುತ್ತಿರುವುದು ಗೊತ್ತಿರುವ ವಿಚಾರವೇ. ಈ ಜೋಡಿ ಸಿಂಪಲ್ ಆಗಿ ಮದುವೆಯಾಗುತ್ತಿದ್ದು ಬಜೆಟ್ ಮಾತ್ರ 10 ಕೋಟಿಯಂತೆ. 
ಹೌದು ನಾಗಚೈತನ್ಯ ಹಾಗೂ ಸಮಂತಾ ರುತ್ ಪ್ರಭು ಅವರ ಮದುವೆ ಅಕ್ಟೋಬರ್ 6ರಂದು ಗೋವಾದಲ್ಲಿ ನಡೆಯಲಿದೆ. ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ನಡೆಯಲಿದ್ದು ಆಪ್ತ 100 ಮಂದಿಗೆ ಮಾತ್ರ ಆಮಂತ್ರಣ ನೀಡಲಾಗಿದೆ. 
ಮದುವೆ ಮಾತ್ರ ಸಿಂಪಲ್ ಎಂದು ಹೇಳುತ್ತಿರುವ ಜೋಡಿ ಮದುವೆಗೆ ಸುಮಾರು 10 ಕೋಟಿ ಖರ್ಚು ಮಾಡಲಿದೆಯಂತೆ. ಅಕ್ಟೋಬರ್ 6ರಂದು ಹಿಂದೂ ಸಂಪ್ರದಾಯದಂತೆ ಮದುವೆ ನಡೆಯಲಿದ್ದು ಮದುವೆಗೆ ವಿಂಟೇಜ್ ಲುಕ್ ನಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com