ಚಂಬಲ್ ಸಿನಿಮಾಗಾಗಿ ಬಣ್ಣ ಹಚ್ಚಲಿರುವ ಯೂ-ಟರ್ನ್ ನಿರ್ದೇಶಕ ಪವನ್ ಕುಮಾರ್!

ಇನ್ನೂ ಚಂಬಲ್ ನಲ್ಲಿ ಲೂಸಿಯಾ ಮತ್ತು ಯೂ-ಟರ್ನ್ ಸಿನಿಮಾಗಳ ನಿರ್ದೇಶಕ ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ, ಚಂಬಲ್ ಚಿತ್ರದಲ್ಲಿ ಪವನ್...
ಪವನ್ ಕುಮಾರ್
ಪವನ್ ಕುಮಾರ್
Updated on
ಬೆಂಗಳೂರು: ಸವಾರಿ-2 ನಿರ್ದೇಶಕ ಜಾಕೋಬ್ ವರ್ಗೀಸ್  ಅವರ ಮುಂದಿನ ಸಿನಿಮಾದಲ್ಲಿ ನಿನಾಸಂ ಸತೀಶ್ ಮತ್ತು ಸೋನು ಗೌಡ ನಟಿಸುತ್ತಿದ್ದಾರೆ, ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ.
ಮತ್ತೊಂದು ಆಸಕ್ತಿದಾಯಕ ವಿಷಯವೆಂದರೇ ಇತ್ತೀಚೆಗೆ ತಮಿಳಿನಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ‘ವಿಕ್ರಮ್ ವೇದ’ ಚಿತ್ರಕ್ಕೆ ಸಂಗೀತ ನೀಡಿದ್ದ ಸ್ಯಾಮ್ ಸಿ.ಎಸ್, ‘ಚಂಬಲ್‘ಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. 
ಇನ್ನೂ ಚಂಬಲ್ ನಲ್ಲಿ  ಲೂಸಿಯಾ ಮತ್ತು ಯೂ-ಟರ್ನ್ ಸಿನಿಮಾಗಳ ನಿರ್ದೇಶಕ ಪವನ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ, ಚಂಬಲ್ ಚಿತ್ರದಲ್ಲಿ ಪವನ್ ನಟನೆಯನ್ನು ಸ್ಪಷ್ಟಪಡಿಸಿರುವ ಜಾಕೋಬ್ ವರ್ಗೀಸ್ ಪವನ್ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ, 
ಚಿತ್ರಕ್ಕೆ ಮತ್ತಷ್ಟು ತೂಕ ಬರಲು ಪವನ್​ಕುಮಾರ್ ಹಾಗೂ ರೋಜರ್ ನಾರಾಯಣ್ ಕಾರಣ. ಪಾಸಿಟಿವ್ ಶೇಡ್ ಇರುವ ವಿಶೇಷ ಪಾತ್ರವೊಂದರಲ್ಲಿ ಪವನ್​ಕುಮಾರ್ ಕಾಣಿಸಿಕೊಂಡರೆ, ನೆಗೆಟಿವ್ ರೀತಿಯ ಪಾತ್ರದಲ್ಲಿ ರೋಜರ್ ನಾರಾಯಣ್ ನಟಿಸಿದ್ದಾರೆ. 
ಅಂದಹಾಗೆ, ‘ಚಂಬಲ್’ ಅಂದ ತಕ್ಷಣ ರಾಜಸ್ಥಾನದ ಚಂಬಲ್ ಕಣಿವೆಗೆ ಸಂಬಂಧಿಸಿದ ಕಥಾನಕ ಇದಲ್ಲ. ಬದಲಿಗೆ ಥ್ರಿಲ್ಲರ್ ಅಂಶವಿರುವ ಸಿನಿಮಾ ಇದು. ಚಂಬಲ್ ಕಣಿವೆಯನ್ನು ಭೇದಿಸುವುದು ಎಷ್ಟು ಕಷ್ಟವೋ, ಅದೇ ರೀತಿಯಲ್ಲಿ ಈ ಕಥೆ ಸಾಗುತ್ತದೆ ಎಂದು ಹೇಳಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com