ಸೆನ್ನಾ ಹೆಗಡೆಯ 'ಕಥೆಯೊಂದು ಶುರುವಾಗಿದೆ' ಸಿನಿಮಾದಲ್ಲಿ ಶ್ರೇಯಾ ಅಂಚನ್, ಅಶ್ವಿನ್ ರಾವ್!

ದಿಗಂತ್ ಮತ್ತು ತಮಿಳಿನ ಖ್ಯಾತ ನಟಿ ಪೂಜಾ ದೇವರಯ್ಯ ನಾಯಕಿಯಾಗಿ ನಟಿಸುತ್ತಿರುವ ಕಥೆಯೊಂದು ಶುರುವಾಗಿದೆ ಎಂಬ ಸಿನಿಮಾಗೆ ಮತ್ತೊಬ್ಬ ನಟಿಯ ...
ಶ್ರೇಯಾ ಅಂಚನ್
ಶ್ರೇಯಾ ಅಂಚನ್
ಬೆಂಗಳೂರು: ದಿಗಂತ್ ಮತ್ತು ತಮಿಳಿನ ಖ್ಯಾತ ನಟಿ ಪೂಜಾ ದೇವರಯ್ಯ ನಾಯಕಿಯಾಗಿ ನಟಿಸುತ್ತಿರುವ ಕಥೆಯೊಂದು ಶುರುವಾಗಿದೆ ಎಂಬ ಸಿನಿಮಾಗೆ ಮತ್ತೊಬ್ಬ ನಟಿಯ ಆಗಮನವಾಗಿದೆ. 
ಒಂದು ಮೊಟ್ಟೆಯ ಕಥೆ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಭರವಸೆ ಮೂಡಿಸಿರುವ ನಟಿ ಶ್ರೇಯಾ ಅಂಚನ್ ಚಿತ್ರತಂಡ ಸೇರಿದ್ದಾರೆ. ನಟ ರಕ್ಷಿತ್ ಶೆಟ್ಟಿ ಹಾಗೂ ನಿರ್ವಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಸೆನ್ನಾ ಹೆಗ್ಡೆ ನಿರ್ದೇಶನ ಮಾಡುತ್ತಿದ್ದಾರೆ. 
ಚಿತ್ರದಲ್ಲಿ ಒಟ್ಟು ಏಳು ಪ್ರಮುಖ ಪಾತ್ರಗಳಿವೆ. ದಿಗಂತ್, ಪೂಜಾ ಈಗಾಗಲೇ ಆಯ್ಕೆಯಾಗಿದ್ದಾರೆ. ‘ಒಂದು ಮೊಟ್ಟೆಯ ಕಥೆ’ ಚಿತ್ರದಲ್ಲಿ ನಟಿಸಿ ಗಮನಸೆಳೆದಿದ್ದ ಶ್ರೇಯಾ ಕೂಡ ಇದೀಗ  ತಂಡ ಸೇರಿಕೊಂಡಿದ್ದಾರೆ. ಶ್ರೇಯಾಗೆ ಜೋಡಿಯಾಗಿ ಕಿರಿಕ್ ಪಾರ್ಟಿ ಖ್ಯಾತಿಯ ಅಶ್ವಿನ್ ರಾವ್ ಪಲ್ಲಕ್ಕಿ ನಟಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com