ಕಿರಿಕ್ ಪಾರ್ಟಿ ರಶ್ಮಿಕಾಗೆ ಟಾಲಿವುಡ್ ನಲ್ಲಿ ಹೆಚ್ಚಿದ ಡಿಮ್ಯಾಂಡ್

ಕಿರಿಕ್ ಪಾರ್ಟಿಯ ಸಾನ್ವಿ ಪಾತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದ ರಶ್ಮಿಕಾ ಮಂದಣ್ಣ ಟಾಲಿವುಡ್ ನಲ್ಲಿ ಈಗ ಬೆಡಿಕೆಯ ನಟಿಯಾಗಿದ್ದಾರೆ. ...
ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ
ಬೆಂಗಳೂರು:  ಕಿರಿಕ್ ಪಾರ್ಟಿಯ ಸಾನ್ವಿ ಪಾತ್ರದ ಮೂಲಕ ಕನ್ನಡಿಗರ ಹೃದಯ ಗೆದ್ದ ರಶ್ಮಿಕಾ ಮಂದಣ್ಣ ಟಾಲಿವುಡ್ ನಲ್ಲಿ ಈಗ ಬೆಡಿಕೆಯ ನಟಿಯಾಗಿದ್ದಾರೆ. 
ಸದ್ಯ ಪುನೀತ್ ರಾಜ್ ಕುಮಾರ್ ಅವರ ಅಂಜನೀಪುತ್ರ ಮತ್ತು ಗಣೇಶ್ ಅಭಿನಯದ ಚಮಕ್ ಸಿನಿಮಾಗಳ ಶೂಟಿಂಗ್ ನಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ.
ತೆಲುಗು ಸಿನಿಮಾಗಳಿಗೂ ರಶ್ಮಿಕಾ ಬೇಡಿಕೆ ಹೆಚ್ಚಿದ್ದ, ನಾಗಶೌರ್ಯ ಮತ್ತು ರಾಮ್ ಅವರ ಪ್ರಾಜೆಕ್ಟ್ ಗಳಿಗೆ ಈಗಾಗಲೇ ರಶ್ಮಿಕಾ ಸಹಿ ಮಾಡಿದ್ದಾರೆ. ಈಗ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ಸಾಯ್ ದೇವರಕೊಂಡ ಜೊತೆಗೆ ಮೂರನೇ ಸಿನಿಮಾಗಾಗಿ ರಶ್ಮಿಕಾ ಸಹಿ ಮಾಡಿದ್ದಾರೆ.
ಪರಶುರಾಮ್ ನಿರ್ದೇಶನದ ಸಿನಿಮಾದಲ್ಲಿ ವಿಜಯ ದೇವರಕೊಂಡ ಅವರ ಜೊತೆ ನಟಿಸಲು ಖುಷಿಯಾಗುತ್ತಿದೆ. ನಿರ್ಮಾಪರ ಅಲ್ಲು ಅರವಿಂದ್ ಮತ್ತು ಬನ್ನಿ ವಾಸ್ ಅವರಿಗೆ ಧನ್ಯವಾದಗಳು ಎಂದು ರಶ್ಮಿಕಾ ಟ್ವೀಟ್ ಮಾಡಿದ್ದಾರೆ.
ಆದರೆ ಈ ಸಿನಿಮಾಗೆ ಲಾವಣ್ಯ ತ್ರಿಪಾಠಿ ಸಹಿ ಮಾಡಬೇಕಿತ್ತು, ಆದರೆ ಕಾರಣಾಂತರಗಳಿಂದ ಈ ಪ್ರಾಜೆಕ್ಟ್ ನಿಂದ ಅವರು ಹೊರ ನಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com