ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ತಾರಕ್' ಚಿತ್ರದ ಟೀಸರ್ ಇಂದು ಬಿಡುಗಡೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ 'ತಾರಕ್' ಚಿತ್ರದ ಟೀಸರ್ ಇಂದು ಸಂಜೆ ಐದು ಗಂಟೆಗೆ ಬಿಡುಗಡೆಯಾಗಲಿದೆ....
ತಾರಕ್ ಚಿತ್ರದ ಸ್ಟಿಲ್
ತಾರಕ್ ಚಿತ್ರದ ಸ್ಟಿಲ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ 'ತಾರಕ್' ಚಿತ್ರದ ಟೀಸರ್ ಇಂದು ಸಂಜೆ ಐದು ಗಂಟೆಗೆ ಬಿಡುಗಡೆಯಾಗಲಿದೆ.  ಈ ಹಿಂದೆ ಚಿತ್ರದ ಹಾಡಗಳನ್ನು ಕೇಳಿದ್ದ ದರ್ಶನ್ ಅಭಿಮಾನಿಗಳು ಈಗ ಚಿತ್ರದ ಟೀಸರ್ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಈ ಚಿತ್ರದಲ್ಲಿ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿರುವ ದರ್ಶನ್ ಅವರು ಇದೇ ಮೊದಲ ಬಾರಿಗೆ ರಗ್ಬಿ ಪ್ಲೇಯರ್ ಆಗಿ ಮಿಂಚಿದ್ದಾರೆ. ಇನ್ನು ನಾಯಕಿಯರಾಗಿ ಶೃತಿ ಹರಿಹರನ್ ಮತ್ತು ಶಾನ್ವಿ ಶ್ರೀವತ್ಸವ್ ನಟಿಸಿದ್ದಾರೆ. 
ಈ ಚಿತ್ರವನ್ನ ಮಿಲನ ಪ್ರಕಾಶ್ ನಿರ್ದೇಶನ ಮಾಡಿದ್ದು, ಇಡೀ ಸಿನಿಮಾದ ಮೇಕಿಂಗ್ ಸಖತ್ ಸ್ಟೈಲಿಶ್ ಆಗಿದೆಯಂತೆ. ಚಿತ್ರದ ಬಹುಮುಖ್ಯ ಪಾತ್ರದಲ್ಲಿ ನಟ ದೇವರಾಜ್ ಕಾಣಿಸಿಕೊಂಡಿದ್ದಾರೆ. 
ತಾರಕ್ ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ, ಹರಿ ಸಂತೋಷ್, ವಿ.ನಾಗೇಂದ್ರ ಪ್ರಸಾದ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಬೆಂಗಳೂರು, ಮಲೇಷ್ಯಾ, ಸ್ವಿಜರ್ ಲ್ಯಾಂಡ್ ನಲ್ಲಿ ಚಿತ್ರದ ಶೂಟಿಂಗ್ ನಡೆದಿದೆ. ಇದೇ ಸೆಪ್ಟೆಂಬರ್ 29ರಂದು ಚಿತ್ರ ರಿಲೀಸ್ ಆಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com