ಆರೇಂಜ್ ಚಿತ್ರದಲ್ಲಿ ಗಣೇಶ್ ಜೊತೆ ಪ್ರಿಯಾ ಆನಂದ್ ರೋಮ್ಯಾನ್ಸ್?

ಬ್ಲಾಕ್ ಬಸ್ಟರ್ ಸಿನಿಮಾ ರಾಜಕುಮಾರ ದಲ್ಲಿ ಪುನಿತ್ ಜೊತೆ ನಟಿಸಿ ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿರುವ ಪ್ರಿಯಾ ಆನಂದ್ ಗಣೇಶ್ ಮುಂದಿನ ಚಿತ್ರಕ್ಕೆ ...
ಪ್ರಿಯಾ ಆನಂದ್
ಪ್ರಿಯಾ ಆನಂದ್
ಬೆಂಗಳೂರು: ಬ್ಲಾಕ್ ಬಸ್ಟರ್ ಸಿನಿಮಾ ರಾಜಕುಮಾರ ದಲ್ಲಿ ಪುನಿತ್ ಜೊತೆ ನಟಿಸಿ ಕನ್ನಡ ಪ್ರೇಕ್ಷಕರ ಹೃದಯ ಗೆದ್ದಿರುವ ಪ್ರಿಯಾ ಆನಂದ್ ಗಣೇಶ್ ಮುಂದಿನ ಚಿತ್ರಕ್ಕೆ ನಾಯಕಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಪ್ರಶಾಂತ್ ರಾಜ್ ನಿರ್ದೇಶನದ ಆರೇಂಜ್ ಸಿನಿಮಾದಲ್ಲಿ ಗಣೇಶ್ ಗೆ ಪ್ರಿಯಾ ನಾಯಕಿಯಾಗುವ ಕುರಿತು ಈಗಾಗಲೇ ಮೊದಲ ಸುತ್ತಿನ ಮಾತುಕತೆ ಮುಗಿದಿದ್ದು, ಆಕೆ ಸಹಿ ಮಾಡಿದ ನಂತರ ಅಧಿಕೃತ ಪ್ರಕಟಣೆ ಮಾಡುವುದಷ್ಟೇ ಬಾಕಿಯಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಪ್ರಿಯಾ ಆನಂದ್ ಕುಟುಂಬ ಸದಸ್ಯರೊಂದಿಗೆ ವಿದೇಶಿ ಪ್ರವಾಸದಲ್ಲಿದ್ದು, ಆಕೆ ಭಾರತಕ್ಕೆ ಮರಳಿದ ನಂತರ ಔಪಚಾರಿಕವಾಗಿ ಮಾತುಕತೆ ಪೂರ್ಣಗೊಳ್ಳಲಿದೆ.
ಪ್ರಿಯಾ ಆನಂದ್ ಮತ್ತು ಗಣೇಶ್ ಜೋಡಿಯ ಹೊಸ ಚಿತ್ರ ನೋಡಲು ಸ್ಯಾಂಡಲ್ ವುಡ್ ಕಾತುರದಿಂದ ಕಾಯುತ್ತಿದೆ, ಗಣೇಶ್ ಹುಟ್ಟುಹಬ್ಬದಂದು  ಆರೇಂಜ್ ಟೈಟಲ್ ಬಿಡುಗಡೆಗೊಂಡು, ಅಕ್ಟೋಬರ್ ನಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಸದ್ಯ ಚಮಕ್ ಚಿತ್ರದಲ್ಲಿ ಗಣೇಶ್ ಬ್ಯುಸಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com