ದರ್ಶನ್ 'ತಾರಕ್' ಗೂ ತಟ್ಟಿದ ಪೈರಸಿ ಬಿಸಿ, ಚಿತ್ರದ ಕೆಲ ದೃಶ್ಯಗಳು ಫೇಸ್ ಬುಕ್ ನಲ್ಲಿ ಲೈವ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷೆಯ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ.
ದರ್ಶನ್ 'ತಾರಕ್'
ದರ್ಶನ್ 'ತಾರಕ್'
Updated on: 
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷೆಯ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. 
ಆದರೆ ಹೀಗೆ ಬಿಡುಗಡೆಯಾದ ಮೊದಲ ದಿನವೇ ಪೈರಸಿಗೆ ಈಡಾಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಇಂದು ಬೆಳಗ್ಗೆ ದರ್ಶನ್ ಅಭಿನಯದ ತಾರಕ್ ಸಿನಿಮಾ ಪ್ರದರ್ಶನವಾಗುತ್ತಿದ್ದ ವೇಳೆ ಫೇಸ್ ಬುಕ್ ಲೈವ್ ಮಾಡಿದ ಘಟನೆ ನಡೆದಿದೆ. ಸಿನಿಮಾದಲ್ಲಿ ದರ್ಶನ್ ರಗ್ಭಿ ಆಡುವ ಹಾಗೂ ಇನ್ನೂ ಕೆಲವು ಸೀನ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. 
ಇದನ್ನು ತಿಳಿದ ದರ್ಶನ್ ಅಭಿಮಾನಿಗಳು, ಚಿತ್ರ ನಿರ್ಮಾಪಕ, ನಿರ್ದೇಶಕರು ಆಕ್ರೋಶಗೊಂಡಿದ್ದಾರೆ. 
"ತಾರಕ್ ಸಿನಿಮಾದ ಕೆಲ ಸೀನ್ ಗಳು ಫೇಸ್ ಬುಕ್ ನಲ್ಲಿ ಹರಿದಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಯಾರು, ಏಕೆ ಹೀಗೆ ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ.  ನಮ್ಮ್ ಅಪ್ರಯತ್ನಕ್ಕೆ ಬೆಲೆ ಕೊಡಬೇಕು. ಅದು ಬಿಟ್ಟು ಹೀಗೆ ಪೈರಸಿ ಮಾಡುವುದು ಸರಿಯಲ್ಲ" ಎಂದು ಚಿತ್ರದ ನಿರ್ದೇಶಕ ಪ್ರಕಾಶ್ ಖಾಸಗಿ ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಬೇಸರದಿಂದ ಹೇಳಿದ್ದಾರೆ.
ಕಳೆದ ವಾರವಷ್ಟೇ ಬಿಡುಗಡೆಯಾದ 'ಭರ್ಜರಿ' ಸಿನಿಮಾದ ಕೆಲವು ಸೀನ್ ಗಳನ್ನು ಫೇಸ್ ಬುಕ್ ನಲ್ಲಿ ಲೈವ್ ಮಾಡಿದ್ದ ಘಟನೆ ನಡೆದಿದು ಈಗ ಮತ್ತೆ 'ತಾರಕ್' ಗೆ ಪೈರಸಿ ಕಾಟ ಪ್ರಾರಂಭವಾಗಿರುವುದು ನಿಜವಾದ ಚಿತ್ರ ಪ್ರೇಮಿಗಳಿಗೆ ಬೇಸರ ತರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com